ದಾವಣಗೆರೆ : ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ಇತ್ತೀಚಿಗೆ ಶ್ರೀ ಶಾರದಾ ಶರನ್ನವರಾತ್ಯುತ್ಸವದ ಪರಿವಾಗಿ ಶ್ರೀ ಕೂಡಲಿ ಶೃಂಗೇರಿ ಶ್ರೀಮದ್ ಜಗದ್ಗುರು ಶ್ರೀಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಆಗಮಿಸಿದ ಶ್ರೀ ಗುರುಗಳಿಗೆ ದಾವಣಗೆರೆಯ ಕಲಾಕುಂಚ ಮತ್ತು ಶ್ರೀ ಗಾಯಿತ್ರಿ ಪರಿವಾರದ ಪರವಾಗಿ ಗೌರವ ಸಮರ್ಪಣೆ ಸಲ್ಲಿಸಿದರು ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದರು.
ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ಹುಣ್ಣಿಮೆಗೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಶ್ರೀ ಶಂಕರ ಮಠದ ಸಭಾಂಗಣದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪರಂಪರೆಯ ಸಮಾರಂಭಕ್ಕೆ ಸೇವೆ ಸಲ್ಲಿಸುತ್ತಿರುವ ಶ್ರೀ ಶಂಕರ ಮಠದ ಅಜಯ್ ಭಟ್, ಪ್ರಾಣೇಶ್, ವಿ, ಮಹಾಂತೇಶ್, ರಾಜಣ್ಣ, ವಿಶ್ವನಾಥ್ ಭಟ್ ಇವರೆಲ್ಲರಿಗೂ ಶ್ರೀ ಗಾಯತ್ರಿ ದೇವಿಯ ಸ್ಮರಣಿಕೆ ಶ್ರೀ ಗುರುಗಳಿಂದ ನೀಡಿ ಗೌರವಿಸಿದರು.
ಕಲಾಕುಂಚದ ಸಂಸ್ಥಾಪಕರು, ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ, ಶ್ರೀ ಗಾಯಿತ್ರಿ ಪರಿವಾರದ ಸಮಿತಿ ಸದಸ್ಯರಾದ ಭಾವನ್ನಾರಾಯಣ, ಸತ್ಯನಾರಾಯಣಮೂರ್ತಿ, ಚನ್ನಬಸವ ಶೀಲವಂತ, ಗುರುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

