ಕನ್ನಡ ಭವನದ “ಉಚಿತ ವಸತಿ ಸೌಕರ್ಯ “ಕ್ಕೆ ಇನ್ನೆರಡು ಸುಸಜ್ಜಿತ ಕೊಠಡಿ

0
8

ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಇದೇ ಜೂಲೈ 26.ಭಾನುವಾರದಂದು ಮಾಜಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ಡಾ. ಸೋಮಶೇಖರ್ ಐ. ಎ. ಎಸ್. ಇವರ ಸರ್ವಾಧ್ಯಕ್ಷತೆಯಲ್ಲಿ, “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ನಡೆಯಲಿದೆ.

ಕನ್ನಡ ಭವನ ನಿರ್ದೇಶಕರಾಗಿರುವ ಡಾ. ವೆಂಕಟ್ರಮಣ ಹೊಳ್ಳರ ಅದ್ಯಕ್ಷತೆಯಲ್ಲಿ ಸಮ್ಮೇಳನ ಸಮಿತಿ ರೂಪುಗೊಂಡು ಕಾರ್ಯ ಪ್ರವ್ರಿತ್ತವಾಗಿದೆ. ಇದೇ ಸಮಯ ಕನ್ನಡ ಭವನ ಕೇಂದ್ರ ಸಮಿತಿ ಉಸ್ತುವಾರಿಯಲ್ಲಿ, ರಜತ ಸಂಭ್ರಮ ಕೊಡುಗೆ ಎಂಬ ನೆಲೆಯಲ್ಲಿ ಉಚಿತ ವಸತಿ ವ್ಯವಸ್ಥೆಗೆ ಅನುಕೂಲಕ್ಕಾಗಿ ಎರಡು ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ತೀರ್ಮಾನವಾಗಿದೆ.

ಇದರ ಕಾಮಗಾರಿ ಪ್ರಾರಂಭ ನಿಮಿತ್ತ ಧಾರ್ಮಿಕ ಮುಂದಾಳು, ಕನ್ನಡ ಭವನದ ಹಿತೈಷಿ ಹಾಗೂ ನಿರ್ದೇಶಕರಾದ ಶ್ರೀ ವೆಂಕಟ್ರಮಣ ಹೊಳ್ಳ ಇವರ ಪ್ರಾರ್ಥನ ಸಮರ್ಪಣೆಯೊಂದಿಗೆ, ವಿಧಿ ವಿಧಾನ ಪೂರ್ವಕ ಕಾಮಗಾರಿ ಚಾಲನೆ ಕಾರ್ಯಕ್ರಮ ಇಂದು 4.7.2026.ಶನಿವಾರ 10.36.ರ ಶುಭ ಮುಹೂರ್ತದಲ್ಲಿ ದೀಪ ಬೆಳಗಿಸಿ, ವಿಧಿ ವಿಧಾನ ಪೂರ್ವಕ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಲಾಯಿತು.

ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ. ಕಾರ್ಯದರ್ಶಿ ವಸಂತ್ ಕೆರೆಮನೆ, ಸ. ಕಾರ್ಯದರ್ಶಿ ಪ್ರದೀಪ್ ನಾಯ್ಕ್ ನಾಗರಕಟ್ಟೆ, ಲೋಕೇಶ್ ಶೆಟ್ಟಿ ಜೆ. ಪಿ. ನಗರ್, ಶರತ್ ಮೀಪುಗುರಿ, ಮುಂತಾದವರು ಉಪಸ್ಥಿತರಿದ್ದರು.

ಸುಮಾರು 10ಲಕ್ಷ ಮೊತ್ತದ ಕಾಮಗಾರಿಯನ್ನು ವಾಮನ್ ರಾವ್ ಸಂದ್ಯಾ ರಾಣಿ ದಂಪತಿಗಳ ಸುಪುತ್ರರಾದ ಸನತ್ ಕುಮಾರ್ ಬಿ. ಇ. ಇವರು ವಹಿಸಿಕೊಂಡಿದ್ದಾರೆ. ಇವರು ಚೀನಾ ದೇಶದಲ್ಲಿ ಹಾರಬರ್ ಇಂಜಿನಿಯರ್ ಉದ್ಯೋಗದಲ್ಲಿದ್ದಾರೆ. ಇವರಿಗೆ ಕನ್ನಡ ಭವನ ಕೇಂದ್ರ ಸಮಿತಿಯು ಅಭಿನಂದನೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here