ಉಡುಪಿ ಕೊಂಕಣಿ ರಂಗಾಂತರ ರಂಗ ತರಬೇತಿ ; ಸಮಾರೋಪ ಸ್ವಪನ್ನ

0
5

ಅನಂತ ವೈದಿಕ ಕೇಂದ್ರ ಉಡುಪಿ , ಸುಪ್ರಸಿದ್ಧ ರಂಗಕರ್ಮಿ , ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ, ಚಲನ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ..ಇವರ ನಿರ್ದೇಶನ ರಂಗಭೂಮಿ ಕೊಂಕಣಿ ರಂಗಾಂತರ ರಂಗ ತರಬೇತಿ ಕಾರ್ಯಗಾರದ  ಸಮಾರೋಪ  ಸಮಾರಂಭ  ಮೇ 31 ರಂದು  ಒಳಕಾಡು ಪದ್ಮಾವತಿ ಸಭಾ ಸದನದಲ್ಲಿ ಸ್ವಪನ್ನ ಗೊಂಡಿತ್ತು.

 ಮುಖ್ಯ ಅತಿಥಿಯಾದ ಮಣಿಪಾಲದ ತೋನ್ಸೆ ರಂಗ ಪೈ ಮಾತನಾಡಿ ರಂಗಭೂಮಿಯಿಂದ  ಜನರಿಗೆ ಉತ್ತಮ ಸಂದೇಶ ಮಾರ್ಗದರ್ಶನ ದೊರೆಯುತ್ತದೆ , ಇಂತಹ ರಂಗ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಒಳಗಿನ ಪ್ರತಿಭೆಯಲ್ಲಿರುವ  ಕಲೆಯನ್ನು  ಹೊರ ಜಗತ್ತಿಗೆ ಪ್ರದರ್ಶನ ಗೊಂಡು ಜನರ  ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ,   ಮಕ್ಕಳ  ಪ್ರತಿಭೆಗಳನ್ನು   ಗುರುತಿಸಿ ಬೆಳೆಸಿದ್ದಲ್ಲಿ ಅವರೂ  ಕೊಡ ಉತ್ತಮ ಕಲಾವಿದರಾಗಿ ರೊಪಗೊಳ್ಳಲು ಸಾಧ್ಯವೆಂದರು.                                                            ಕೊಂಕಣಿ ಆಕಾಡಮಿ ಮಾಜಿ ಅಧ್ಯಕ್ಷ  , ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ ಕೊಂಕಣಿ ಭಾಷೆ  ಸಂಸ್ಕೃತಿ ಬೆಳೆಸುವ ಉದ್ದೇಶ ದಿಂದ  ಈ  ಕಾರ್ಯ ರಾಜ್ಯದ ಎಲ್ಲೆಡೇ   ಹಮ್ಮಿಕೊಂಡಿದ್ದೂ ರಂಗ ಕ್ಷೇತ್ರದ ಕಲೆಯನ್ನು  ಉಳಿಸಿ ಬೆಳೆಸುವಲ್ಲಿ ಈ  ಕಾರ್ಯಾಗಾರದಲ್ಲಿ  ಕಲಾಸಕ್ತರನ್ನು ಒಗ್ಗೊಡಿಸಿ ಅವರೊಳಗೆ ಅಡಗಿರುವ ಕಲೆ ಹೊರ ತಂದು ಅವರಿಗೆ ವೇದಿಕೆಯನ್ನು ಕಲ್ಪಿಸುವುದೇ ನಮ್ಮ್ ತರಬೇತಿಯ ಉದ್ದೇಶವಾಗಿರುತ್ತದೆ.                                                                                                               ಶಿಬಿರಾರ್ಥಿ ಗಳಿಗೆ  ರಂಗ ತರಬೇತಿ  ವಿವಿಧ ಭಾಷೆಗಳ ಮೂಲಕ ಅಭಿನಯಿಸುವ   ಮುಖ ವರ್ಣಿಕೆ , ಲೈಟಿಂಗ್ , ಸೌಂಡ್ಸ್ ಬಗ್ಗೆ   ಕಲಾ ಪ್ರಕಾರಗಳನ್ನು ತಿಳಿಸಿಕೊಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ  ಸ್ಮರಣಿಕೆ ,ಪ್ರಶಸ್ತಿ ಪತ್ರ ನೀಡಿ ಶುಭ ಹಾರೈಸಲಾಯಿತು.                                             ಸಮಾರಂಭದಲ್ಲಿ    ರಂಗ ನಿರ್ದೇಶಕ  ಗಣೇಶ್  ಕಂಡ್ಲೂರು ,  ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಾಧವ ಶೇಟ್ , ಕಮಲಾಕ್ಷ ಶೇಟ್  ,ರಂಗ ಪೋಷಕ  ಆನಂದ್ ನಾಯಕ್ ಮಲ್ಪೆ  ,ರಂಗ ನಟಿ  ಶ್ವೇತಾ ಸುಧಾ ಪೈ  ,  ರಂಗ  ನಟ ರಾಜಗೋಪಾಲ್ ಶೇಟ್ ,     ಕೊಂಕಣಿ ರಂಗಾ ತರಂಗ ಸಂಚಾಲಕ ಶಶಿ ಭೂಷಣ ಕಿಣಿ ಉಪಸ್ಥಿತರಿದ್ದರು
ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೆ. ಮೂ . ಚೆಂಪಿ ರಾಮಚಂದ್ರ  ಭಟ್ ಸ್ವಾಗತಿಸಿ , ಕಾರ್ಯ ಕ್ರಮ ನಿರೂಪಿಸಿದರು. ಕೊಂಕಣಿ   ಸಮಾಜದ  ವಿವಿಧ  ಮುಖಂಡರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here