ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಪ್ರತಿಭೆಗಳ ಸಾಧನೆ; ರಂಜಿತಾ ಪೈ ಮತ್ತು ಅಚ್ಯುತ್ ಕಾಮತ್ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣ

0
43

ಉಡುಪಿ: ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಂತಿಮ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಉಡುಪಿ ಇಂದ್ರಾಳಿ ನಿವಾಸಿಗಳಾದ ಜಯಲಕ್ಷ್ಮೀ ಪೈ ಮತ್ತು ರವೀಂದ್ರ ಪೈ ದಂಪತಿಯ ಪುತ್ರಿ ರಂಜಿತಾ ಪೈ ಬಿ. ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಅವರು ಉಡುಪಿಯ ಐ. ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.

ಅದೇ ರೀತಿ, ಉಡುಪಿ ಚಿಟ್ಟಾಡಿ ನಿವಾಸಿಗಳಾದ ಸೌಮ್ಯ ಎಸ್. ಕಾಮತ್ ಮತ್ತು ಎಂ. ಶೇಷಗಿರಿ ಕಾಮತ್ ದಂಪತಿಯ ಪುತ್ರ ಅಚ್ಯುತ್ ಎಸ್. ಕಾಮತ್ ಅವರೂ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ. ಇವರೂ ಸಹ ಐ. ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.

ಇಬ್ಬರು ಪ್ರತಿಭೆಗಳ ಸಾಧನೆಗೆ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದು, ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here