ಅಕ್ರಮ ವಲಸಿಗರಿಗೆ ನಾವೆಂದೂ ಬೆಂಬಲಿಸಿಲ್ಲ, ಎಸ್ ಐ ಆರ್ ನಲ್ಲಿ ಸೇರಿಸುವ ಪ್ರಶ್ನೆ ಖಂಡಿತ ಇಲ್ಲ-ಐವನ್ ಡಿಸೋಜ

0
4


ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ 83ಸಾವಿರ ಮಂದಿ ಅಕ್ರಮ ವಲಸಿಗರನ್ನು ಮನಮೋಹನ್ ಸಿಂಗ್ ಸರಕಾರ ದೇಶದಿಂದ ಹೊರಗಟ್ಟಿರುವುದನ್ನು ನೆನಪು ಮಾಡಿಕೊಂಡು ಕಾಂಗ್ರೆಸ್ ಯಾವತ್ತಿಗೂ ಅಕ್ರಮ ವಲಸಿಗರಿಗೆ ಬೆಂಬಲವನ್ನು ನೀಡುತ್ತಿಲ್ಲ, ಎಸ್ಐಆರ್ ಪ್ರಕ್ರಿಯೆಯಲ್ಲಿ ಸೇರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು.
ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ 8,000 ಮಂದಿಯನ್ನು ಮಾತ್ರ ದೇಶದಿಂದ ಅಕ್ರಮ ವಲಸಿಗರನ್ನು ಹೊರದೂಡಿರುವುದು ಅಂಕಿ ಅಂಶದಿಂದ ಸ್ಪಷ್ಟಗೊಳ್ಳುತ್ತದೆ.
ಅಧಿಕಾರಕ್ಕೆ ಬಂದ ತಕ್ಷಣದಿಂದ ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ ಹಾಗೂ ಉತ್ತರ ಪೂರ್ವ ರಾಜ್ಯಗಳಿಂದ ಅಕ್ರಮ ವಲಸಿಗರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುತ್ತೇವೆಂದು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯ ಪ್ರಕಾರ ಎಷ್ಟು ಮಂದಿಯನ್ನು ದೇಶದಿಂದ ಹೊರಗಟ್ಟಲಾಗಿದೆ ಎಂಬುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕೆಂದು ಶಾಸಕರು ಕೇಂದ್ರ ಸರ್ಕಾರದಲ್ಲಿ ಕೇಳಿಕೊಂಡರು.
ನುಸುಳು ಕೋರರನ್ನು ಹಿಡಿಯಬೇಕಾದವರು ಕೇಂದ್ರ ಸರಕಾರವೇ ಹೊರತು ರಾಜ್ಯ ಸರ್ಕಾರದ ಕಾರ್ಯವಲ್ಲ. ನಾವು ರಾಜ್ಯದ ನೈಜ ಮತದಾರರನ್ನು ಮಾತ್ರ ಪಿಆರ್‌ಸಿ ನೀಡುವ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಹಾಯವನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ ಸರಕಾರ ರಾಜ್ಯದ 54ಸಾವಿರ ಬೂತ್ ಗಳ ಮೂಲಕ ಆಧಾರ್, ವೋಟರ್ ಐಡಿ, ಮನೆ ದಾಖಲೆ ಇತ್ಯಾದಿಗಳನ್ನು ನೋಡಿ ಅಧಿಕಾರಿಗಳಿಗೆ ಸಹಕಾರವನ್ನು ನೀಡಲಾಗುತ್ತಿದೆ. ಅವಶ್ಯಕತೆ ಇದ್ದಲ್ಲಿ ಪಿಡಿಒಗಳು ಕೂಡ ಪಿ ಆರ್ ಸಿ ಯನ್ನು ನೀಡುವ ಮೂಲಕ ಎಸ್ ಐ ಆರ್ ಪ್ರಕ್ರಿಯೆಗೆ ವೇಗವನ್ನು ನೀಡಲಾಗುತ್ತಿದೆ. ಬಿ ಎಲ್ ಎ ಗಳು ಕೂಡ ಸಹಕರಿಸುತ್ತಿದ್ದಾರೆ.
ಅಕ್ರಮ ವಲಸಿಗರಿಗೆ ಯಾವತ್ತೂ ಸಹಕಾರ ನೀಡದೆ ಇದ್ದರೂ ಕೂಡ ಬಿಜೆಪಿಯವರು ವೃತ ಆರೋಪ ಮಾಡುತ್ತಿರುವುದು ಖಂಡನೀಯ. ಕೆಲವಾರು ಮಂದಿ ಎರಡು ಮೂರು ಕಡೆಯಲ್ಲಿ ಎಸ್ಐಆರ್ ಮಾಡಿಸುತ್ತಿರುವ ಬಗ್ಗೆ ದಾಖಲೆಗಳು ಲಭ್ಯವಾಗುತ್ತಿವೆ ಮುಂದೆ ಸೂಕ್ತ ಸಮಯದಲ್ಲಿ ಅವೆಲ್ಲವನ್ನು ಎದುರಿಗೆ ಇಟ್ಟು ತಿಳಿಸಲಾಗುವುದು ಎಂದು ಬಿಜೆಪಿಯವರನ್ನು ಹೆಸರಿಸದೆಯೇ ಎಚ್ಚರಿಸಿದರು.


ವರದಿ ರಾಯಿ ರಾಜ ಕುಮಾರ್