ಉಡುಪಿ : ಮಾನವ ಕುಲದ ಪರಮಕಲ್ಯಾಣ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫೊಂಡಾ ಗೋವಾದಲ್ಲಿ ಮೇ 17 ರಿಂದ 19 ರ ವರೆಗೆ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವನ್ನು ಫರ್ಮಾಗುಡಿ , ಫೊಂಡಾ ,ಗೋವಾ ದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಉತ್ಸವದಲ್ಲಿ ಸಹಭಾಗಿ ಆಗಲು ಉಡುಪಿ ಜಿಲ್ಲೆಯ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ವಾಹನಗಳ ಮೂಲಕ ಗೋವಾದ ಕಡೆಗೆ ಪ್ರಯಾಣ ಮಾಡಿದ್ದಾರೆ. ಎಲ್ಲಾ ಹಿಂದುತ್ವ ನಿಷ್ಠರು ಕೇಸರಿ ಟೋಪಿ ಧರಿಸಿದ್ದರು ಮತ್ತು ವಾಹನಗಳು/ಬಸ್ಸು/ರೈಲು/ವಿಮಾನದ ಮೇಲೆ ಕೇಸರಿ ಧ್ವಜ ಹಾರಿಸಿರುವುದರಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಮತ್ತು ಶಕ್ತಿಯ ಸಂಚಾರ ಆಗುತ್ತಿತ್ತು.

ಈ ಸಮಯದಲ್ಲಿ ಶ್ರೀ.ಮಹೇಶ್ ಕಾಮತ್, ಮಾಲಿಕರು ಆಭರಣ ಜ್ಯುವೆಲರ್ಸ, ಶ್ರೀ.ಧನರಾಜ್ ಉಚ್ಚಿಲ, ಧರ್ಮಪ್ರೇಮಿ., ಉದ್ಯಮಿಗಳಾದ ಶ್ರೀ.ಪ್ರಕಾಶ್ ಶೇಟ್ ಕುಂದಾಪುರ,ಉದ್ಯಮಿಗಳಾದ ಶ್ರೀ.ರಾಘವೇಂದ್ರ ಶೆಟ್ಟಿ ಮಣಿಪಾಲ, Rtd Airvice Marshal ರಮೇಶ್ ಕಾರ್ಣಿಕ್, ಧರ್ಮಪ್ರೇಮಿ ಶ್ರೀ.ಸತೀಶ್ ಆಚಾರ್, ಶ್ರೀ ರಾಮಣ್ಣ ಮಣಿಪಾಲ ಮುಂತಾದ ಗಣ್ಯರು ಉಪಸ್ಥಿತರಿದ್ದರು.