ಇಂದು ಮಂಗಳೂರು ನಗರದ ಅತ್ಯಂತ ಪ್ರಮುಖ ಕಾಮಗಾರಿ ಆಗಿರತಕ್ಕಂತಹ ಮತ್ತು ಮಂಗಳೂರು ನಗರದ ಪ್ರವೇಶದ ದ್ವಾರವೆಂದೇ ಕರೆಯಲ್ಪಟ್ಟ ಕಂಕನಾಡಿ ಪಂಪ್ವೆಲ್ ಕಾಮಗಾರಿಯು ಕಾಂಕ್ರೀಟೀಕರಣದ ಒಂದು ಭಾಗದ ಕಾಮಗಾರಿಯು ಮುಕ್ತಾಯಗೊಂಡಿದ್ದು ಇನ್ನೂ ಬಾಕಿಇರುವ ಸಣ್ಣ ಕೆಲಸಗಳು ಹಾಗೂ ಚರಂಡಿ ವ್ಯವಸ್ಥೆಯು ನೀರಿನ ಸಂಚಾರ ದಾರಿಯನ್ನು ಸುಗಮಗೊಳಿಸವ ಕಾರ‍್ಯವನ್ನು ಮುಗಿಸಿ ಜೂನ್ ೧೦ಕ್ಕೆ ಸರ‍್ವಜನಿಕ ಸೇವೆಗೆ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. ಇಂದು ಐವನ್ ಡಿʼಸೋಜಾ ಇವರು ಇಂಜಿರ‍್ಗಳೊದಿಗೆ ಈ ಭಾಗಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಯಾವುದೇ ಸಂರ‍್ಭದಲ್ಲಿ ನೀರು ಅಂಗಡಿಗಳಿಗೆ ನುಗ್ಗುವುದು ಇಂತಹ ತೊಂದರೆಗಳು ಅಗಬಾರದೆಂದು ಇಂಜಿನಿರ‍್ಗಳಿಗೆ ನರ‍್ದೇಶನ ನೀಡಿದರು.

ಅದೇ ರೀತಿ ಈಗಾಗಲೇ ಒಳಚರಂಡಿ ವ್ಯವಸ್ಥೆಯನ್ನು ಜೋಡಣೆ ಮಾಡುವ ಕೆಲಸ ಮಾಡಲಾಗಿದ್ದು ಒಳಚರಂಡಿ ವ್ಯವಸ್ಥೆಯು ಯಾವುದೇ ತೊಂದರೆ ಇಲ್ಲ ಎಂದು ನಗರ ಪಾಲಿಕೆ ಮುಖ್ಯ ಇಂಜಿನಿಯರ್ ನಾಗರಾಜ್ ರವರು ತಿಳಿಸಿದ್ದಾರೆ. ಇದೇ ರೀತಿ ಇನ್ನೊಂದು ಭಾಗದ ಕಾಮಗಾರಿಯು ಮೂರು ತಿಂಗಳ ಒಳಗಡೆ ಮಾಡಿ ಮುಗಿಸುವುದಾಗಿ ಕೂಡ ವಾಗ್ದಾನವನ್ನು ನೀಡಿದ್ಧಾರೆ. ನಿಗದಿತ ಸಮಯಕ್ಕೆ ಮುಗಿಸಿ ಒಂದು ಭಾಗದ ಕಾಮಗಾರಿಯು ಬಹಳ ಒಳ್ಳೆ ರೀತಿ ಉತ್ತಮರ‍್ಜೆಯಿಂದ ಕಾಮಗಾರಿ ಮುಗಿಸಿದ್ದಾಕ್ಕಾಗಿ ಐವನ್ ಡಿʼಸೋಜಾರವರು ಇಂಜಿನಿಯರ್ ಮತ್ತು Contractor ರವರಿಗೆ ಐವನ್ ಡಿʼಸೋಜಾ ಅಭಿನಂದಿಸಿದ್ದಾರೆ.
ಇನ್ನೂ ಬಾಕಿ ಇರುವ ಚರಂಡಿ ಮತ್ತು ಪಾದಾಚಾರಿಗಳು ನಡೆಯುವ ಜಿooಣಠಿಚಿಣhನ್ನು ಕೂಡ ನಗರಪಾಲಿಕೆಯಿಂದ ಮಾಡಬೇಕಾಗಿದ್ದು, ಇದಕ್ಕೆ ಕೂಡ ಟೆಂರ‍್ನ್ನು ಕರೆಯಲಾಗಿದೆ ಚರಂಡಿ ಹಾಗೂ ಈooಣಠಿಚಿಣhನ ಕಾಮಗಾರಿಯಯನ್ನು ಕೂಡಲೇ ನರ‍್ವಹಿಸಲು ಕ್ರಮಕೈಗೊಳ್ಳಬೇಕೆಂದು ಐವನ್ ಡಿʼಸೋಜಾರವರು ಈ ಸಂರ‍್ಭದಲ್ಲಿ ಸೂಚಿಸಿದ್ದಾರೆ. ಆಗೂ ರಸ್ತೆ ಕಾಮಗಾರಿಯನ್ನು ಐವನ್ ಡಿʼಸೋಜಾರವರು ಪರಿಶೀಲಿಸಿದ್ದಾರೆ.
ಈ ಸಂದರ‍್ಭದಲ್ಲಿ PWD ಇಂಜಿನಿಯರ್‌ಗಳಾದ ಪ್ರೀತಮ್ ಹಾಗೂ ಹೇಮಂತ್, ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್ ನಾಗರಾಜ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕರ‍್ಪೊರೇಟರ್‌ಗಳಾದ ನವೀನ್ ಡಿಸೋಜಾ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿ ಎಸ್, ಸತೀಶ್ ಪೆಂಗಲ್, ಕಾಂಗ್ರೆಸ್ ನಾಯಕರುಗಳಾದ ಸುಹೆಲ್ ಕಂದಕ್, ಚೇತನ್ ಕುಮಾರ್, ಉಪೇಂದ್ರ ಕುತ್ಕೋರಿಗುಡ್ಡ, ಅನಿಲ್ ಕುತ್ಕೋರಿಗುಡ್ಡ, ಉಪಸ್ಥಿತರಿದ್ದರು.

