ಕಡಂದಲೆ ಪ್ರೌಢಶಾಲೆಯಲ್ಲಿ “ಯಕ್ಷ ಧ್ರುವ-ಯಕ್ಷ ಶಿಕ್ಷಣ ” ತರಬೇತಿ ಉದ್ಘಾಟನಾ ಕಾರ್ಯಕ್ರಮ

0
74

ಮೂಡುಬಿದಿರೆ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ.) ಮಂಗಳೂರು ಇವರ ವತಿಯಿಂದ “ಯಕ್ಷ ಧ್ರುವ-ಯಕ್ಷ ಶಿಕ್ಷಣ ” ಯಕ್ಷಗಾನ ಶಿಕ್ಷಣ ಅಭಿಯಾನದ ಪ್ರಸ್ತುತ ಸಾಲಿನ ಯಕ್ಷಗಾನ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸಂಸ್ಥೆಯ ಮೂಡುಬಿದಿರೆ ಘಟಕದ ಗೌರವಾಧ್ಯಕ್ಷರು ಹಾಗೂ ಕೇಂದ್ರ ಸದಸ್ಯರಾದ ಶ್ರೀಪತಿಭಟ್ ರವರು ಉದ್ಘಾಟಿಸಿದರು.

ವೇದಿಕೆಯಲ್ಲಿ KMF ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಕೆ ಸುಚರಿತ ಶೆಟ್ಟಿ, ಯಕ್ಷ ಧ್ರುವ ಪಟ್ಲ ಫೌಂಡೇಷನ್ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಖಂಡಿಗೆ, ಸಂಚಾಲಕರಾದ ರವಿ ಪ್ರಸಾದ್ ಕೆ ಶೆಟ್ಟಿ, ಉಪಾಧ್ಯಕ್ಷರಾದ ಸದಾಶಿವ ರಾವ್ ನೆಲ್ಲಿಮಾರು, ಮುಖ್ಯ ಶಿಕ್ಷಕರಾದ ದಿನಕರ ಕುಂಭಾಶಿ ಹಾಗೂ ಯಕ್ಷ ಗುರುಗಳಾದ ಅನ್ವಿತಾ ಕೆರೆಕಾಡು ವೇದಿಕೆಯಲ್ಲಿ ಇದ್ದರು. ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಶ್ರೀಪತಿಭಟ್ ರವರ ಮೊಮ್ಮಗನಾದ ಪ್ರಮಥರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸುಧಾಕರ ಪೊಸ್ರಾಲು ನೆರವೇರಿಸಿದರು. ದಿನಕರ ಕುಂಭಾಶಿರವರು ಸ್ವಾಗತಿಸಿದರು ಹಾಗೂ ಸಂಪತ್ ರಾಜ್ ರವರು ವಂದನೆಗೈದರು. ಶಿಕ್ಷಕರು, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here