Saturday, June 14, 2025
Homeಅಂತಾರಾಷ್ಟ್ರೀಯಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕದಿಂದ ದಶಮಾನೋತ್ಸವಕ್ಕೆ 37.5 ಲಕ್ಷ ದೇಣಿಗೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ ಘಟಕದಿಂದ ದಶಮಾನೋತ್ಸವಕ್ಕೆ 37.5 ಲಕ್ಷ ದೇಣಿಗೆ

ವಕ್ವಾಡಿ ಪ್ರವೀಣ್ ಶೆಟ್ಟಿ ಯವರ ಸಂಪೂರ್ಣ ಸಹಕಾರ ದಿಂದ ಫೌಂಡೇಶನ್ ದುಬೈ ಘಟಕದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿ,ಹಾಗೂ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ರವರ ಅವಿರತ ಪ್ರಯತ್ನದಿಂದ, ಪಟ್ಲ ದಶಮ ಸಂಭ್ರಮದ ಸಂದರ್ಭದಲ್ಲಿ ದುಬೈಯಲ್ಲಿರುವ ಉದಾರ ಮನಸ್ಸಿನ ದಾನಿಗಳಿಂದ 37.5 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಅದು ಇನ್ನೂ ಮುಂದುವರೆದು ಇನ್ನಷ್ಟು ದಾನಿಗಳನ್ನು ಸಂಪರ್ಕಿಸುವುದಾಗಿಯೂ ಹೇಳಿದ್ದಾರೆ.
ದುಬೈ ಯಕ್ಷದ್ರುವ ಪಟ್ಲ ಘಟಕದ ಎಲ್ಲಾ ಪದಾಧಿಕಾರಿಗಳಿಗೆ, ಯಕ್ಷಗಾನ ಅಭ್ಯಾಸ ತರಗತಿಯ ಸದಸ್ಯರಿಗೆ, ಫೌಂಡೇಶನ್ ಗೆ ಸ್ಪಂದಿಸಿದ ಎಲ್ಲ ದಾನಿಗಳಿಗೆ ಯಕ್ಷದ್ರುವ ಪಟ್ಲ ಫೌಂಡೇಶನ್ ಕೇಂದ್ರ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular