Saturday, June 14, 2025
HomeUncategorizedಸಂಸ್ಕಾರಯುತ ವಿದ್ಯೆಯಿಂದ ಜೀವನದಲ್ಲಿ ಯಶಸ್ಸು: ಅರವಿಂದ ಬೋಳಾರ್

ಸಂಸ್ಕಾರಯುತ ವಿದ್ಯೆಯಿಂದ ಜೀವನದಲ್ಲಿ ಯಶಸ್ಸು: ಅರವಿಂದ ಬೋಳಾರ್

ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡರೆ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಮನೆಯಲ್ಲಿ ಹಿರಿಯರನ್ನು ಪ್ರೀತಿ ಮತ್ತು ಗೌರವದಿಂದ ನೋಡುವುದು ಹಾಗೂ ಅವರ ಜೀವನದ ಕೊನೆತನಕ ಆಸರೆಯಾಗಿ ನಿಲ್ಲುವುದು ಉತ್ತಮ ಸಂಸ್ಕಾರದ ಭಾಗವಾಗಿದೆ. ಸಂಸ್ಕಾರದವಿಲ್ಲದ ವಿದ್ಯೆಯು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದು ಅಸಾಧ್ಯ ಎಂದು ಖ್ಯಾತ ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ಅಭಿಪ್ರಾಯ ಪಟ್ಟರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿಯ ಸಹ ಪ್ರಾಧ್ಯಾಪಕ ಡಾ. ವಿಷ್ಣುಮೂರ್ತಿ ಪ್ರಭು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯ ಪಡೆಯಬೇಕಾದರೆ ಜ್ಞಾನ ಸಂಪಾದನೆಯೊಂದಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಜಯ ಅತಿಥಿಗಳನ್ನ ಸ್ವಾಗತಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾಕೋಶದ ಸಂಯೋಜನಾಧಿಕಾರಿ ಡಾ. ಲೋಕೇಶ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಜಗದೀಶ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಉಪನ್ಯಾಸಕಿ ಫೆಲಿಟ ಮೋನಿಸ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕುಂಚಾರಿಯ ಕೆ ವಂದಿಸಿದರು. ಉಪನ್ಯಾಸಕಿ ಪೂರ್ಣಿಮಾ ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಜ್ಯೋತಿ ರೈ ಅವರು ಅರವಿಂದ ಬೋಳಾರ್ ಅವರ ಸನ್ಮಾನ ಪತ್ರವನ್ನು ವಾಚಿಸಿದರು.

RELATED ARTICLES
- Advertisment -
Google search engine

Most Popular