ಮೂಡುಬಿದಿರೆ : ಪಂಚಭೂತ ಮತ್ತು ಪಂಚೇoದ್ರೀಯ ತತ್ವಗಳ ಪಾರಮಾರ್ಥಿಕ ಸತ್ಯ ಮತ್ತು ರಹಸ್ಯವಾದ ಕರ್ಮಸಿದ್ದಾoತವನ್ನು ನಮಗೆ ವಿಸ್ತರಿಸಿ ಹೇಳುವಂತದ್ದು ಯಕ್ಷಗಾನ ತಾಳಮದ್ದಳೆ.ಆ ಮೂಲಕ ಪ್ರೇಕ್ಷಕರಲ್ಲಿ ಸುಪ್ತವಾಗಿರುವಂತ ಜ್ಞಾನದ ಅಮೃತದ ಧಾರೆಯನ್ನು ಪಡೆಯಲಿಕ್ಕೆ ಯಕ್ಷಗಾನ ಕಾರಣವಾಗುತ್ತಿದೆ. ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗವೇ ಯಕ್ಷಗಾನ ತಾಳಮದ್ದಳೆ ಎಂದು ಮೂಡುಬಿದಿರಿ ಶ್ರೀ ಜೈನ ಮಠದ ಶ್ರೀ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅವರು ಜೈನ ಮಠದ ಸಭಾಂಗಣದಲ್ಲಿ ನಡೆದ ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಶ್ರಾವಣಶ್ರವ್ಯ-ವಾಙ್ಮಯೋತ್ಸವ – ಶ್ರೀಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಮಾರoಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡುಬಿದಿರಿ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನೂಮಂತ ದೇವಸ್ಥಾನದ ಮೊಕ್ತೇಸರ ಹಿರಿಯ ಸಹಕಾರೀ ಧುರಿಣ ಪಡುಮಾರ್ನಾಡು ದಯಾನಂದ ಪೈಯವರು ಮಾತನಾಡಿ ಮೂಡುಬಿದಿರಿಯಲ್ಲಿರುವ ಆಮ್ನಾಯಃ ಯಕ್ಷ ಬಳಗ ಸಹಿತ 10ಕ್ಕೂ ಹೆಚ್ಚಿನ ಯಕ್ಷಗಾನ ಸಂಘಟನೆಗಳು ಸನಾತನ ಧರ್ಮದ ಹಿರಿಮೆ ಗರಿಮೆಯನ್ನು ಬಿತ್ತರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದು ಜನರಲ್ಲಿ ಸಂಸ್ಕೃತಿ ಮತ್ತು ಸಾತ್ವಿಕತೆಯನ್ನುoಟುಮಾಡುವಲ್ಲಿ ಈ ಸಂಘಟನೆಗಳು ಬಹಳಷ್ಟು ಶ್ರಮಿಸುತ್ತಿರುವುದನ್ನು ಅವರು ಶ್ಲಾಘಿಸಿದರು.ಸಂಘಟಕ ಡಾ ವಿನಾಯಕ ಭಟ್ಟರ ಬಹುಮುಖ ಪ್ರತಿಭೆಯನ್ನು ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾoಸ್ಕೃತಿಕ ಚಟುವಟಿಕೆಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿರುವ, ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಯಕ್ಷಗಾನವೇ ಮೊದಲಾದ ಕಲಾಪ್ರೋತ್ಸಾಹಕರಾದ ಮೂಡುಬಿದಿರಿಯ ಯುವ ಉದ್ಯಮಿ ರುದ್ರಾoಶ ಕನ್ಸ್ಟ್ರಕ್ಷನ್ ನ ಅಜಯ್ ದೀಕ್ಷಿತ್ ಶೆಟ್ಟಿಯವರನ್ನು ಫಲಪುಷ್ಪ, ಸ್ಮರಣಿಕೆಗಳನಿತ್ತು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯ್ತು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಸಂಘಟಕ, ವಿಮರ್ಶಕ ಎಂ ಶಾಂತರಾಮ ಕುಡ್ವರವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗದ ಸಂಚಾಲಕ ಡಾ. ವಿನಾಯಕ ಭಟ್ ಗಾಳಿಮನೆಯವರು ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಗವತ ಶಿವಪ್ರಸಾದ್ ಭಟ್ ಕಾಂತಾವರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ನಂತರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕೂಟ ನಡೆಯಿತು.

