ರಾಮಕೃಷ್ಣ ಮಠದಲ್ಲಿ ಆಗಸ್ಟ್ 10ರಿಂದ ಯೋಗಾಸನ ಶಿಬಿರ

0
4

ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಇದೇ ಆಗಸ್ಟ್  10ನೇ ತಾರೀಕಿನಿಂದ  ಸಂಜೆ 5.00  ರಿಂದ 6.30  ರ ವರೆಗೆ ಯೋಗಾಸನ ಶಿಬಿರ ನಡೆಯಲಿದೆ. ಯೋಗರತ್ನ ಶ್ರೀ  ಗೋಪಾಲಕೃಷ್ಣ ದೇಲಂಪಾಡಿಯವರ ಶಿಷ್ಯರು  ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು. 

ಅಂತರಾಷ್ಟ್ರಿಯ ಯೋಗದಿನಾಚರಣೆಯ  ಪೂರ್ವಭಾವಿ ತಯಾರಿಯ ಯೋಗಾಭ್ಯಾಸ.    ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 2414412  ಸಂಪರ್ಕಿಸಿ.