ಪುತ್ತಿಗೆಯಲ್ಲಿ ಅ.21ರಂದು 18ನೇ ವರ್ಷದ ಪುತ್ತೆ ಶಾರದೋತ್ಸವ

0
5

ಮೂಡುಬಿದಿರೆ : ಸಾರ್ವಜನಿಕ ಶ್ರೀ ಶಾರದಾಪೂಜಾ ಮಹೋತ್ಸವ ಸಮಿತಿ ಪುತ್ತಿಗೆ ವತಿಯಿಂದ 18ನೇ ವರ್ಷದ ಪುತ್ತೆ ಶಾರದೋತ್ಸವವು ಅ.21ರಂದು ಬುಧವಾರ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಬೆಳಿಗ್ಗೆ 7.30ಕ್ಕೆ ತ್ರಿನಾರಿಕೇಳ ಗಣಯಾಗ ಹಾಗೂ ಶ್ರೀ ಶಾರದಾಮಾತೆಯ ಮೃಣ್ಮಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 10ರಿಂದ 11ರವರೆಗೆ ಭಜನಾ ಸಂಕೀರ್ತನೆ, ಬಳಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ 2 ಗಂಟೆಯಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಜೆ 5 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು,6-00ಗಂಟೆಗೆ ಬಳಿಕ ವಿಸರ್ಜನಾ ಪೂಜೆ ನೆರವೇರಿಸಿ ಭವ್ಯ ಶೋಭಾಯಾತ್ರೆಯೊಂದಿಗೆ ಶಾರದಾಮಾತೆಯ ವಿಗ್ರಹ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ಶಾರದೋತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಾರದಾಮಾತೆಯ ಕೃಪೆಗೆ ಪಾತ್ರರಾಗುವಂತೆ ಸಾರ್ವಜನಿಕ ಶ್ರೀ ಶಾರದಾಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮನವಿ ಮಾಡಿದ್ದಾರೆ.