ಮೂಡುಬಿದಿರೆ : ಯಕ್ಷಗಾನದ ಅಧ್ಯಯನ, ಅನುಸಂಧಾನ, ಪ್ರದರ್ಶನ ಹಾಗೂ ದಾಖಲೀಕರಣ ಕಾರ್ಯದಲ್ಲಿ ತೊಡಗಿರುವ ಯಕ್ಷ–ಸಂಸ್ಕೃತಿ ಬಳಗ ಗಾಳಿಮನೆ ವತಿಯಿಂದ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮವು ಜುಲೈ 19ರಂದು (ಭಾನುವಾರ) ಮಧ್ಯಾಹ್ನ 3.00 ಗಂಟೆಗೆ ಮೂಡುಬಿದಿರೆಯ ಸೋ’ಹಮ್–ಗಾಳಿಮನೆ, ವಿವೇಕಾನಂದ ನಗರ, ಪೇಪರ್ ಮಿಲ್ ರಸ್ತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾನ್ ಚಂದ್ರಶೇಖರ ಸಣ್ಣ ಭಟ್ಟ ವಹಿಸಲಿದ್ದು, ಧನಲಕ್ಷ್ಮೀ ಉದ್ಯಮ ಸಮೂಹದ ಮಾಲಕರಾದ ಕೆ. ಶ್ರೀಪತಿ ಭಟ್ಟ ಅವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಮಿತ್ತೂರು ತಿರುಮಲೇಶ್ವರ ಭಟ್ಟರು, ಪ್ರಧಾನ ಅಭ್ಯಾಗತರಾಗಿ ಬಿ. ಭುಜಬಲಿ, ಡಾ. ಎಸ್.ಡಿ. ಹೆಗಡೆ ಹಾಗೂ ಡಾ. ಎಂ. ಪ್ರಭಾಕರ ಜೋಷಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವಾಭಿವಂದನಂ, ಕೀರ್ತಿಶೇಷ ಸಂಸ್ಮರಣಂ, ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಧಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿವೆ. ಕೀರ್ತಿಶೇಷ ಕಮಲಾಕರ ಹೆಗಡೆ ಹುಕ್ಲಮಕ್ಕಿ, ಪರಮೇಶ್ವರ ಭಟ್ಟ ಬಾಳೆಹಳ್ಳಿ ಹಾಗೂ ಮಾಧವ ಆಚಾರ್ಯ ಸಂಪಿಗೆ ಅವರ ಸೇವೆಯನ್ನು ಸ್ಮರಿಸಲಾಗುವುದು.
ಇದೇ ಸಂದರ್ಭದಲ್ಲಿ ವಿನಾಯಕ ಚಂದ್ರಶೇಖರ ಭಟ್ಟ ಗಾಳಿಮನೆ ಸಂಸ್ಕರಣ ವಚನಗಳನ್ನು ನೀಡಲಿದ್ದು, ಕಾರ್ಯಕ್ರಮವನ್ನು ಸದಾಶಿವ ರಾವ್ ನೆಲ್ಲಿಮಾರ್, ಅಧ್ಯಕ್ಷರು, ಯಕ್ಷಮೇನಕ (ರಿ.) ಮೂಡುಬಿದಿರೆ ನಿರೂಪಿಸಲಿದ್ದಾರೆ.

