ಬೆಳ್ತಂಗಡಿ ತಾಲೂಕು ಜಾನಪದ ಪರಿಷತ್ತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0
29

ಬೆಳ್ತಂಗಡಿ: ಕರ್ನಾಟಕ ಜಾನಪದ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಘಟಕ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಧಿಕೃತ ಅನುಮೋದನೆ ಯೊಂದಿಗೆ ಅಂತಿಮಗೊಳಿಸಿರುತ್ತಾರೆ.

ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ವೇಣೂರಿನ ಬ್ರೈಟ್‌ ಹೊರಿಝೋನ್‌ ಶಾಲೆಯ ಅಧ್ಯಕ್ಷರಾದ ಡಾ. ಶರತ್‌ ಗೋರೆ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಹರೀಶ್‌ ಕೆ. ಆದೂರು ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ವೇಣೂರಿನ ಐ.ಟಿ.ಐ. ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್‌ ಕೆ.ಆರ್‌. ಹಾಗೂ ಗುರುವಾಯನಕೆರೆಯ ವಿದ್ವತ್‌ ಕಾಲೇಜಿನ ಆಡಳಿತಾಧಿಕಾರಿ ಅಶೋಕ್‌ ಕುಮಾರ್‌ ಶೆಟ್ಟಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಪದ್ಮಪ್ರಸಾದ್‌ ಬಿ., ಕೋಶಾಧಿಕಾರಿಯಾಗಿ ಮುಕುಂದ ಚಂದ್ರ ಸಿ.ಎನ್‌., ಸಹ ಕಾರ್ಯದರ್ಶಿಯಾಗಿ ಅಶ್ವಿತ್‌ ಕುಲಾಲ್‌, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ್‌ ಡಿ., ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೇಷ್ಮಾ, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹರ್ಷ ಭಟ್‌ ನೇಮಕಗೊಂಡಿದ್ದಾರೆ.

ಗೌರವ ಸಲಹೆಗಾರರಾಗಿ ರೇಣುಕಾಂಬ ಬಿ.ಎನ್‌., ಕಾಂತಪ್ಪ ಹಾಗೂ ಸುಧಾ ಭರತ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಇದಲ್ಲದೆ, ತಾಲೂಕು ಉಸ್ತುವಾರಿಯಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಮಂದಾರ ರಾಜೇಶ್‌ ಭಟ್‌ ಅವರನ್ನು ನೇಮಕ ಮಾಡಲಾಗಿದೆ.
ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ತಿಳಿಸಿರುತ್ತಾರೆ.

ನೂತನ ಪದಾಧಿಕಾರಿಗಳ ತಂಡವು ತಾಲೂಕಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದೆ.

ವರದಿ -ಮಂದಾರ ರಾಜೇಶ್