ಕಿನ್ನಿಮೂಲ್ಕಿ ಕನ್ನರ್ಪಾಡಿ ಬ್ರಾಹ್ಮಣ ಸಂಘದ ವಾರ್ಷಿಕ ಸಭೆ ; ಸಾಧಕರಿಗೆ ಸನ್ಮಾನ

0
9

ಉಡುಪಿ ಕಿನ್ನಿಮೂಲ್ಕಿ : ಕನ್ನರ್ಪಾಡಿ  ಬ್ರಾಹ್ಮಣ ಸಂಘದ  ವಾರ್ಷಿಕ ಸಭೆಯು ಶ್ರೀದೇವಿ ಸಭಾ ಭವನದಲ್ಲಿ ಇತ್ತೀಚಿಗೆ ನೆಡೆಯಿತು.

ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ  ನೇತೃತ್ವದಲ್ಲಿ ಜರಗಿತು , ಮುಖ್ಯ ಅತಿಥಿಯಾಗಿ  ಉಡುಪಿ  ಜಿಲ್ಲಾ   ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸಂದೀಪ್ ಕುಮಾರ್  ,     ಉಡುಪಿ  ತಾಲ್ಲೂಕ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ  ಶ್ರೀಕಾಂತ್ ಉಪದ್ಯಾಯ   ಸಮಾಜ ಸೇವೆಯಲ್ಲಿ   ವಿಪ್ರ ಸಮಾಜದ ಸಾಧಕರಾದ  ರಮೇಶ್ ರಾವ್  ಬೀಡು  , ಖ್ಯಾತ ವೈದ್ಯರು  ಶಿಕ್ಷಣ ತಜ್ಞರಾದ ಡಾ ಸೀತಾರಾಮ್ ಭಟ್ , ಪ್ರತಿಭಾ ಪುರಸ್ಕಾರದಲ್ಲಿ ವಿಶೇಷ ಸಾಧನೆಗೈದ  ಹರೀಶ್ ಭಟ್  ರವರನ್ನು  ಶಾಲು ಹೊದಿಸಿ ಫಲ ಪುಷ್ಪ ,  ಸ್ಮರಣಿಕೆ ನೀಡಿ ಗೌರವಿಸಲಾಯಿತು.

ದಾಂಪತ್ಯ ಜೀವನದ  ಸುವರ್ಣ ಮೊಹೋತ್ಸವದ  ದಂಪತಿಗಳನ್ನು ಈ  ಸಂದರ್ಭದಲ್ಲಿ ಗೌರವಿಸಲಾಯಿತು  ಮಹಿಳಾ ವಲಯದ ಅಧ್ಯಕ್ಷರಾದ ಡಾ   ಉಷಾ ಚಡಗ ,  K.V. ಆಚಾರ್ಯ , ಜನಾರ್ಧನ ಭಟ್ , ಮುರಳಿ ಕೃಷ್ಣ ಭಟ್   ವಿಜಯಲಕ್ಷ್ಮಿ ಕಿರಣ್ , ಬೃಂದಾ ರಾಜೇಂದ್ರ , ಹಾಗೂ ಪದಾಧಿಕಾರಿಗಳು ನೂರಾರು  ಸಮಾಜ ಬಾಂದವರು  ಉಪಸ್ಥಿತರಿದ್ದರು.

ಅಧ್ಯಕ್ಷ ಎಂ.ಎನ್. ರಾಜೇಂದ್ರ  ಸ್ವಾಗತಿಸಿ   ಕಾರ್ಯದರ್ಶಿ ಮಂಚಿ ಸುರೇಶ್ ರಾವ್ ವಾರ್ಷಿಕ ವರದಿ ವಾಚಿಸಿದರು , ಸುದರ್ಶನ ಆಚಾರ್ಯ ವಾರ್ಷಿಕ   ಲೆಕ್ಕ ಪತ್ರ ಮಂಡಿಸಿ  , ಸಂಯುಕ್ತ ಕರ್ನಾಟಕ  ಉಡುಪಿ ಜಿಲ್ಲಾ ವರದಿಗಾರ ಕಿರಣ್ ಮಂಜನ ಬೈಲ್ ಕಾರ್ಯಕ್ರಮ ನಿರೊಪಿಸಿ , ವಂದಿಸಿದರು  ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನೆಡೆಯಿತು.       

LEAVE A REPLY

Please enter your comment!
Please enter your name here