ಉಡುಪಿ ಕಿನ್ನಿಮೂಲ್ಕಿ : ಕನ್ನರ್ಪಾಡಿ ಬ್ರಾಹ್ಮಣ ಸಂಘದ ವಾರ್ಷಿಕ ಸಭೆಯು ಶ್ರೀದೇವಿ ಸಭಾ ಭವನದಲ್ಲಿ ಇತ್ತೀಚಿಗೆ ನೆಡೆಯಿತು.
ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ ನೇತೃತ್ವದಲ್ಲಿ ಜರಗಿತು , ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸಂದೀಪ್ ಕುಮಾರ್ , ಉಡುಪಿ ತಾಲ್ಲೂಕ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀಕಾಂತ್ ಉಪದ್ಯಾಯ ಸಮಾಜ ಸೇವೆಯಲ್ಲಿ ವಿಪ್ರ ಸಮಾಜದ ಸಾಧಕರಾದ ರಮೇಶ್ ರಾವ್ ಬೀಡು , ಖ್ಯಾತ ವೈದ್ಯರು ಶಿಕ್ಷಣ ತಜ್ಞರಾದ ಡಾ ಸೀತಾರಾಮ್ ಭಟ್ , ಪ್ರತಿಭಾ ಪುರಸ್ಕಾರದಲ್ಲಿ ವಿಶೇಷ ಸಾಧನೆಗೈದ ಹರೀಶ್ ಭಟ್ ರವರನ್ನು ಶಾಲು ಹೊದಿಸಿ ಫಲ ಪುಷ್ಪ , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದಾಂಪತ್ಯ ಜೀವನದ ಸುವರ್ಣ ಮೊಹೋತ್ಸವದ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು ಮಹಿಳಾ ವಲಯದ ಅಧ್ಯಕ್ಷರಾದ ಡಾ ಉಷಾ ಚಡಗ , K.V. ಆಚಾರ್ಯ , ಜನಾರ್ಧನ ಭಟ್ , ಮುರಳಿ ಕೃಷ್ಣ ಭಟ್ ವಿಜಯಲಕ್ಷ್ಮಿ ಕಿರಣ್ , ಬೃಂದಾ ರಾಜೇಂದ್ರ , ಹಾಗೂ ಪದಾಧಿಕಾರಿಗಳು ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.
ಅಧ್ಯಕ್ಷ ಎಂ.ಎನ್. ರಾಜೇಂದ್ರ ಸ್ವಾಗತಿಸಿ ಕಾರ್ಯದರ್ಶಿ ಮಂಚಿ ಸುರೇಶ್ ರಾವ್ ವಾರ್ಷಿಕ ವರದಿ ವಾಚಿಸಿದರು , ಸುದರ್ಶನ ಆಚಾರ್ಯ ವಾರ್ಷಿಕ ಲೆಕ್ಕ ಪತ್ರ ಮಂಡಿಸಿ , ಸಂಯುಕ್ತ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಕಿರಣ್ ಮಂಜನ ಬೈಲ್ ಕಾರ್ಯಕ್ರಮ ನಿರೊಪಿಸಿ , ವಂದಿಸಿದರು ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನೆಡೆಯಿತು.

