ಮೂಡುಬಿದಿರೆ : ಶಿವಮೊಗ್ಗ ರಂಗಾಯಣ ಕಲಾವಿದರಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮೇ 29 ರಂದು ಬೊಳುವಾರರ ಸ್ವಾತಂತ್ರ್ಯದ ಓಟ ವಿಶೇಷ ನಾಟಕ ನಡೆಯಲಿದೆ.
ವಿದ್ಯಾಗಿದಿಯ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನೀನಾಸಂ ನಟರಾಜ ಹೊನ್ನವಳ್ಳಿ ನಿರ್ದೇಶನದಲ್ಲಿ ಈ ನಾಟಕ ಮೂಡಿಬರಲಿದೆ. ಈ ನಾಟಕವು ಭಾರತ ವಿಭಜನೆಯ ಕರಾಳ ದಿನಗಳನ್ನು ಅನಾವರಣ ಗೊಳಿಸಲಿದೆ.
ನೆಲೆ ಕಳೆದುಕೊಂಡ ಜನರ, ನಿರಾಶ್ರಿತರ, ಜೀವನ, ಸಂಘರ್ಷ, ಭಿನ್ನತೆ, ಸಾಮರಸ್ಯ, ಸಹಬಾಳ್ವೆ, ಮಾನವೀಯತೆ ಇತ್ಯಾದಿ ಸಂದೇಶಗಳನ್ನು ಮೂಡಿಸುವ ನಾಟಕವಾಗಿದೆ. ಸಂಜೆ 6.30 ರಿಂದ 9.30 ರ ತನಕ ನಾಟಕ ನಡೆಯಲಿರುವುದು.
.

