ರಾಮ್ ಫ್ರೆಂಡ್ಸ್ (ರಿ. ಕಟೀಲ್ ಸೇವಾ ತಂಡದ ” 7ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮ

0
36

ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದ 7ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ಹೊಸ ಬೆಳಕು ಸೇವಾ ಟ್ರಸ್ಟ್ (ರಿ.) ಮಣಿಕುಮೇರಿ ಕೌಡೂರು ಗ್ರಾಮ, ಬೈಲೂರು, ಕಾರ್ಕಳ ತಾಲೂಕು ಇಲ್ಲಿ ಜರುಗಿತು ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಪಂಚಶಕ್ತಿ ಎಂಟರ್ಪ್ರೈಸ್ಸಸ್ ಮಾಲಕರಾದ ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆಶ್ರಮಕ್ಕೆ10000 ಚೆಕ್ಕನ್ನು ಹಸ್ತಾಂತರಿಸಲಾಯಿತು ಹಾಗೂ ಅಗತ್ಯವಿರುವ 40000 ಮೌಲ್ಯದ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು ಹಾಗೂ 2 ಅಶಕ್ತ ಕುಟುಂಬಕ್ಕೆ 20000 ಸಹಾಯಧನ ಹಸ್ತಾಂತರಿಸಲಾಯಿತು, ನಿರಂತರ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸೇವಾ ತಂಡಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಲಾ ಕನ್‌ಸ್ಟ್ರಕ್ಷನ್ ಕಟೀಲ್ ಇದರ ಮಾಲಕರಾದ ಲೋಕಯ್ಯ ಸಾಲ್ಯಾನ್ ಕೊಂಡೇಲ, ಬಿರುವೆರ್ ಕುಡ್ಲ ಬಜಪೆ ಘಟಕ ಅಧ್ಯಕ್ಷರಾದ ಚಂದ್ರ ಪೂಜಾರಿ ಬಜ್ಪೆ,ಕಾರ್ಕಳ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಪಿ.ಎಸ್.ಐ,ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್, ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದ ಸ್ಥಾಪಕಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು ಹಾಗೂ ತಂಡದ ಪದಾಧಿಕಾರಿಗಳು ಮತ್ತು ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು. ತಂಡದ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.