ಧರ್ಮಸ್ಥಳದಲ್ಲಿ ಅ. 11ರಿಂದ 19ರವರೆಗೆ ನವರಾತ್ರಿ ವೈಭವ

0
8

ಉಜಿರೆ: ನವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳದಲ್ಲಿ ಅ. 11ರಿಂದ 19ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ದಿನಗಳಲ್ಲಿ ಪ್ರತಿದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಲಿದೆ.

ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ನಾಡಿನ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ. 11, ಭಾನುವಾರ: ಧರ್ಮಸ್ಥಳದ ಕುಮಾರಿ ಪ್ರಾಪ್ತಿ ಶೆಟ್ಟಿ ಮತ್ತು ನಿಡಿಗಲ್‌ನ ಕುಮಾರಿ ಆದ್ವಿ ಅವರಿಂದ ಭಕ್ತಿಸಂಗೀತ.

ಅ. 12, ಸೋಮವಾರ: ಮಂಗಳೂರಿನ ಅರ್ಕುಳದ ಪವಿತ್ರ ವಿನಯ್ ಮಯ್ಯ ಅವರಿಂದ ಸುಗಮ ಸಂಗೀತ.

ಅ. 13, ಮಂಗಳವಾರ: ಮೈಸೂರಿನ ಕುಮಾರಿ ಮಾನ್ಸಿ ಅವರಿಂದ ಭಕ್ತಿಸಂಗೀತ.

ಅ. 14, ಬುಧವಾರ: ಮಂಗಳೂರಿನ ಪೆರ್ಲದ ಮಾಸ್ಟರ್ ಆಗಮ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

ಅ. 15, ಗುರುವಾರ: ಬೆಂಗಳೂರಿನ ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಹಾಗೂ ಮಾಸ್ಟರ್ ಅಸ್ರಮೇಯ ಗುರುಪ್ರಸಾದ್ ಅವರಿಂದ ನೃತ್ಯ ಮತ್ತು ಗಾನಲಹರಿ ಕಾರ್ಯಕ್ರಮ.

ಅ. 16, ಶುಕ್ರವಾರ: ಬೆಂಗಳೂರಿನ ಸನತ್‌ಕುಮಾರ್ ಅವರಿಂದ ವಯಲಿನ್ ವಾದನ.

ಅ. 17, ಶನಿವಾರ: ಬಂಟ್ವಾಳ ಪೊಳಲಿಯ ಕುಮಾರಿ ಮಯೂರಿ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.

ಅ. 18, ಭಾನುವಾರ: ಕುಂದಾಪುರದ ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡದಿಂದ ಸುಮಧುರ ಗಾನವೈಭವ.

ಅ. 19, ಸೋಮವಾರ: ಬೆಂಗಳೂರಿನ ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗದಿಂದ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಪೊಳಲಿಯ ಮಲ್ಲಿಕಾಮಟ್ಟಿ ಮತ್ತು ಬಳಗದಿಂದ ರಾತ್ರಿ 9ರಿಂದ 11.30ರವರೆಗೆ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಅಂಗವಾಗಿ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಧರ್ಮಸ್ಥಳದ ವತಿಯಿಂದ ಮನವಿ ಮಾಡಲಾಗಿದೆ.