ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆದಿದೆ. ಇತ್ತ ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಗಂಭೀರ ಆರೋಪ ಮಾಡಿದ್ದರು. ಇದೀಗ ಶಶಿಕಾಂತ್ ಸೆಂಥಿಲ್, ಶಾಸಕ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ
ವಕೀಲ ಸೂರ್ಯ ಮುಕುಂದರಾಜ್ ಜೊತೆ ಸಿಟಿ ಸಿವಿಲ್ ಕೋರ್ಟ್ ಗೆ ಆಗಮಿಸಿದ ಸಸಿಕಾಂತ್ ಸಿಂಥೆಲ್ ಅವರು ಶಾಸಕ ರೆಡ್ಡಿ ವಿರುದ್ಧ ಖಾಸಗಿ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದು, ಸೆಪ್ಟೆಂಬರ್ 11 ರಂದು 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
‘ಕೋರ್ಟ್ಗೆ ಬಂದು ಉತ್ತರ ಕೊಡಲಿ ರೆಡ್ಡಿ’
ದೂರು ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಸಂಸದ ಸಸಿಕಾಂಥ್ ಸೆಂಥಿಲ್, ಬುರುಡೆ ಕೇಸ್ನಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನನ್ನ ಹೆಸರು ತಗೊಂಡಿದ್ದಾರೆ. ಇದೀಗ ಕೋರ್ಟ್ನಲ್ಲೇ ಉತ್ತರ ಕೊಡಲಿ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಈ ಕೇಸಲ್ಲಿ ನನ್ನ ಹೆಸರು ಯಾಕೆ ಬಂತು, ಗೊತ್ತಿಲ್ಲ. ನನ್ನ ಹೆಸರನ್ನ ತಮಿಳುನಾಡಿನ ಮಾಜಿ ಪೊಲೀಸ್ ಅಧಿಕಾರಿ ಅಲ್ಲಿ ತಗೊಂಡಿದ್ದಾರೆ. ಇದು ಹೀಗೆ ಬಿಟ್ಟರೆ, ಒಂದು ಸ್ಟೋರಿ ಕ್ರಿಯೆಟ್ ಅಗುತ್ತೆ. ನಾನು ಲೀಗಲ್ ಸಿಸ್ಟಮ್ ನಲ್ಲಿ ಹೋಗ್ತೀದ್ದೀನಿ. ಸತ್ಯ ಏನಿದೆ ತನಿಖೆಯಿಂದ ಹೊರ ಬರಲಿ ಎಂದು ಸೆಂಥಿಲ್ ಗುಡುಗಿದ್ದಾರೆ.
ಧಾರ್ಮಿಕ ವಿಚಾರವನ್ನು ರಾಜಕೀಯವಾಗಿ ಬಳಸ್ತಿದ್ದಾರೆ. ಯಾರೋ ಒಬ್ಬರು ಸೆಂಥಿಲ್ ಕ್ರಿಶ್ಚಿಯನ್ ಅಂತ ಹೇಳಿದ್ದಾರೆ. ನಾನು ಇವರನ್ನು ಕೊನೆಯದಾಗಿ ನೋಡಿದ್ದು ಬಳ್ಳಾರಿಯಲ್ಲಿ. ನನ್ನ ಫಸ್ಟ್ ದಿನ ಇವರು ಅರೆಸ್ಟ್ ಆಗಿದ್ದರು. ಕರ್ನಾಟಕ ಪ್ರಾಪರ್ಟಿ ಲೂಟಿ ಮಾಡಿದ ವ್ಯಕ್ತಿ. ಜಡ್ಜ್ ಗಳನ್ನು ಬಿಟ್ಟಿಲ್ಲ. ಅವರಿಗೆ ಈ ರೀತಿ ಯಾರು ಹೇಳಿದ್ರೋ ಗೊತ್ತಿಲ್ಲ. ತಮಿಳುನಾಡಿನ ಪಾಲಿಟಿಕ್ಸ್ ಸೇರುವ ಯತ್ನ ಇರ್ಬೇಕು. ಕರ್ನಾಟಕ ಜನ ಬುದ್ದಿವಂತರು ಇದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ ಎಂದು ಸಂಸದ ಸಸಿಕಾಂತ್ ಸೆಂಥಿಲ್ ಹೇಳಿಕೆ ನೀಡಿದ್ದಾರೆ.
ವಾಟ್ಸಾಪ್ ನೋಡಿಕೊಂಡು ಹೇಳಿಕೆ ನೀಡಿದ್ದಾರೆ. ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ಹೊರಟಿದ್ದಾರೆ. ನಾನು ಕರ್ನಾಟಕದಲ್ಲಿ 10 ವರ್ಷ ಕೆಲಸ ಮಾಡಿದ್ದೇನೆ. ಈ ತರ ಆರೋಪ ಮಾಡ್ತಿರೋದು ಯಾರೂ ಅಂತ ನಿಮಗೆ ಗೊತ್ತಿದೆ. ಕರ್ನಾಟಕ ಪ್ರಾಪರ್ಟಿ ಲೂಟಿ ಮಾಡಿದ ವ್ಯಕ್ತಿ. ಏಳು ವರ್ಷ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿಯ ಆರೋಪ. ತಲೆ ಬುರುಡೆ ಎಲ್ಲಿ ಸಿಕ್ಕಿದೆ ಅಂತ ನನಗೆ ಗೊತ್ತಿಲ್ಲ. ನಾನು ದೇಶದಲ್ಲಿ ರೈಟ್ ವಿಂಗ್ ಪಾಲಿಟಿಕ್ಸ್ ವಿರೋಧಿಸಿಕೊಂಡು ಬಂದವನು. ಇದಕ್ಕೆ ನನ್ನನ್ನು ಟಾರ್ಗೆಟ್ ಮಾಡಿರಬಹುದು ಎಂದು ಸೆಂಥಿಲ್ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ನಾನು ಯಾರನ್ನು ಭೇಟಿ ಮಾಡಿಲ್ಲ
ಬುರುಡೆ ಕೇಸ್ ಬಗ್ಗೆ ತನಿಖೆ ನಡೀತಿದೆ ನಾನು ಮಾತಾಡಲ್ಲ. ನನ್ನ ಹೆಸರು ಬಂದಿದೆ ಎಂಬ ಕಾರಣಕ್ಕೆ ದೂರು ಕೊಡ್ತಿದ್ದೇನೆ. ದೆಹಲಿಯಲ್ಲಿ ನನ್ನ ಭೇಟಿ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸೆಂಥಿಲ್, ನನಗೆ ದೆಹಲಿಯಲ್ಲಿ ಇನ್ನೂ ಮನೆಯೇ ಕೊಟ್ಟಿಲ್ಲ. ತಮಿಳುನಾಡು ಹೌಸ್ ನಲ್ಲಿ ಇದ್ದೀನಿ. ಇನ್ನು ನಾನು ಯಾವ ಮನೆಯಲ್ಲಿ ಭೇಟಿಯಾಗಲಿ. ಬಂಧಿತ ಆರೋಪಿ ಭೇಟಿಯೂ ಇಲ್ಲ, ಯಾವುದು ಇಲ್ಲ. ಬುರುಡೆ ಎಲ್ಲಿ ಸಿಕ್ತು, ತಂದರು ಅನ್ನೋದು ಗೊತ್ತಿಲ್ಲ ಎಂದುಸಂಸದ ಸಸಿಕಾಂತ್ ಸೆಂಥಿಲ್ ಹೇಳಿಕೆ ನೀಡಿದ್ದಾರೆ.

