ಬಿಲ್ಲವ ಸಮುದಾಯಕ್ಕೆ ಅವಾಚ್ಯ ನಿಂದನೆ ಆರೋಪ : ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲು..!

0
13

ಹೆಬ್ರಿ : ದೈವ ಸಾನಿಧ್ಯದಲ್ಲಿ ಮಜಿಪು ನುಡಿಯುವ ಬಿಲ್ಲವ ಸಮುದಾಯದ ಯುವಕನಿಗೆ ಅನ್ಯ ಸಮುದಾಯದ ವ್ಯಕ್ತಿಯೊಬ್ಬ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಪರವ ಸಮುದಾಯದ ಕೋಲ ಕಟ್ಟುವ ಗುಂಡು ಪರವ ಎನ್ನುವ ವ್ಯಕ್ತಿಯಾಗಿದ್ದು, ಮಧ್ಯರಾತ್ರಿ ವೇಳೆ ಕರೆ ಮಾಡಿ ಬಿಲ್ಲವ ಸಮಾಜದ ಬಗ್ಗೆ ಹಾಗೂ ಯುವಕ ಮತ್ತು ಆತನ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಬಿಲ್ಲವ ಸಂಘದ ವತಿಯಿಂದ ಹೆಬ್ರಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಬಿಲ್ಲವ ಸಂಘದ ಪದಾಧಿಕಾರಿಗಳು, “ದೈವ ಸಾನಿಧ್ಯ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ನಿಂದನೆ ಮಾಡಿರುವ ಪ್ರಕರಣವನ್ನು ಪೊಲೀಸರು ಕೂಲಂಕುಶವಾಗಿ ತನಿಖೆ ನಡೆಸಬೇಕು. ಯುವಕ ಹಾಗೂ ಬಿಲ್ಲವ ಸಮುದಾಯದ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ವ್ಯಕ್ತಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೆಬ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here