ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ತಾಲ್ಲೂಕು ಮತ್ತು ಜನಜಾಗೃತಿ ವೇದಿಕೆ. ಬಿ ಸಿ ರೋಡ್ ವಲಯ ಇದರ ವತಿಯಿಂದ ರಚನೆಯಾದ “ಧರ್ಮಜ್ಯೋತಿ” ನವಜೀವನ ಸಮಿತಿ. ಬಿ ಸಿ ರೋಡ್ ವಲಯ ಇದರ ವತಿಯಿಂದ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ಬಿ ಸಿ ರೋಡ್ ಇಲ್ಲಿನ ದೇವಸ್ಥಾನ ವಠಾರದಲ್ಲಿ ಶ್ರದ್ದಾ ಕೇಂದ್ರದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.
ನವಜೀವನ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಬಿ ಮೂಡ ಒಕ್ಕೂಟದ ಸಂಘದ ಸದಸ್ಯರು ಈ ಕಾರ್ಯದಲ್ಲಿ ಭಾಗವಹಿಸಿದ್ದರು..ನಂತರ ದೇವರಿಗೆ ನವಜೀವನ ಸಮಿತಿಯಿಂದ ವಿಶೇಷ ಪೂಜಾ ಸೇವೆಯನ್ನು ಮಾಡಲಾಯಿತು. ಬಿ ಸಿ ರೋಡ್ ವಲಯದ ಮೇಲ್ವಿಚಾರಕ ಗಿರೀಶ್, ನವಜೀವನ ಸಮಿತಿ ಪೋಷಕರಾದ ಆಶಾಲತಾ ದಿನೇಶ್ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು.

