ಶಿಶುಗಳ ಚರ್ಮದ ರಕ್ಷಣೆಗೆ ಹಿಮಾಲಯ ಬೇಬಿ ಲೋಷನ್ ಹಾಗೂ ಬೇಬಿ ಕ್ರೀಮ್ ಮಹತ್ವ ಸಾರಿದ ಅಭಿಯಾನ
ಮಂಗಳೂರು : ನವಜಾತ ಶಿಶುಗಳ ಚರ್ಮದ ಆರೈಕೆಯಲ್ಲಿ ಪೋಷಕರು ಎದುರಿಸುವ ಗೊಂದಲಗಳನ್ನು ಪರಿಹರಿಸಲು ವೈದ್ಯರ ಮೊದಲ ಶಿಫಾರಸಿನ ಬ್ರ್ಯಾಂಡ್ ಹಿಮಾಲಯ ಬೇಬಿಕೇರ್ ತನ್ನ ನೂತನ ಚಳಿಗಾಲದ ಅಭಿಯಾನ ಪೆಹ್ಲೆ ವಿಂಟರ್ ಕಾ ಪೆಹ್ಲಾ ಲೇಯರ್ ಆರಂಭಿಸಿದೆ. ಮಗುವಿನ ಚಳಿಗಾಲದ ದಿನಚರಿಯು ಸರಿಯಾದ ಮೊದಲ ರಕ್ಷಣಾ ಪದರದಿಂದಲೇ ಶುರುವಾಗಬೇಕು ಎಂಬ ಪರಿಕಲ್ಪನೆಯಡಿ ಇದನ್ನು ರೂಪಿಸಲಾಗಿದೆ.

ಮಗುವಿನ ಚಳಿಗಾಲದ ಚರ್ಮದ ರಕ್ಷಣೆಯ ಸುತ್ತ ಪೋಷಕರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳು ಮತ್ತು ಆತಂಕಗಳಿಗೆ ಈ ಅಭಿಯಾನವು ಪರಿಹಾರವನ್ನು ಒದಗಿಸುತ್ತದೆ. ಉತ್ಪನ್ನಗಳಿಂದ ಅಲರ್ಜಿ ಉಂಟಾಗಬಹುದೇ ಎಂಬ ಭಯ, ಈಗಾಗಲೇ ಎಣ್ಣೆ ಬಳಸುತ್ತಿರುವಾಗ ಲೋಷನ್ ಅಥವಾ ಕ್ರೀಮ್ ಅಗತ್ಯವಿದೆಯೇ ಎಂಬ ಸಂದೇಹ ಹಾಗೂ ಮಗುವಿನ ಅತಿಸೂಕ್ಷ್ಮ ಚರ್ಮಕ್ಕೆ ಪ್ರತ್ಯೇಕ ವಿಶೇಷ ಉತ್ಪನ್ನಗಳ ಆವಶ್ಯಕತೆ ಏನು ಎಂಬಿತ್ಯಾದಿ ವಿಷಯಗಳನ್ನು ಇದು ಸ್ಪಷ್ಟಪಡಿಸುತ್ತದೆ. ಪೋಷಕರ ಈ ಗೊಂದಲಗಳನ್ನು ದೂರಮಾಡಿ, ಮಗುವಿನ ಚಳಿಗಾಲದ ದೈನಂದಿನ ದಿನಚರಿಯಲ್ಲಿ ಪ್ರತ್ಯೇಕ ಬೇಬಿ ಸ್ಕಿನ್ಕೇರ್ ಉತ್ಪನ್ನಗಳ ಪಾತ್ರವೇನು ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುವುದು ಹಿಮಾಲಯ ಬೇಬಿಕೇರ್ನ ಮುಖ್ಯ ಉದ್ದೇಶವಾಗಿದೆ. ಈ ಜಾಗೃತಿಗಾಗಿ ಒಂದು ಮುಖ್ಯ ಚಿತ್ರ ಹಾಗೂ ನೈಜ ಸನ್ನಿವೇಶಗಳನ್ನು ಒಳಗೊಂಡ ಆರು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಅಭಿಯಾನದ ಕುರಿತು ಮಾತನಾಡಿದ ಹಿಮಾಲಯ ವೆಲ್ನೆಸ್ ಕಂಪನಿಯ ಬೇಬಿಕೇರ್ ವಿಭಾಗದ ನಿರ್ದೇಶಕರಾದ ಚಕ್ರವರ್ತಿ ಎನ್. ವಿ. ಅವರು, “ಮಗುವಿನ ಮೊದಲ ಚಳಿಗಾಲವು ಪೋಷಕರಿಗೆ ಅತ್ಯಂತ ವಿಶೇಷವಾದ ಘಟ್ಟವಾಗಿದ್ದು, ದೈನಂದಿನ ಶಿಶು ಪಾಲನೆಯಲ್ಲಿ ಅನೇಕ ಹೊಸ ಪ್ರಶ್ನೆಗಳನ್ನು ತರುತ್ತದೆ. ಪೆಹ್ಲೆ ವಿಂಟರ್ ಕಾ ಪೆಹ್ಲಾ ಲೇಯರ್ ಮೂಲಕ ಈ ವಾಸ್ತವವನ್ನು ಆಧರಿಸಿ, ಪೋಷಕರು ಚಳಿಗಾಲವನ್ನು ಆತ್ಮವಿಶ್ವಾಸದಿಂದ ಎದುರಿಸಲು ನೆರವಾಗುವ ಸರಳ ಹಾಗೂ ಆಪ್ತವಾದ ಚಿಂತನೆಯನ್ನು ರೂಪಿಸಲು ನಾವು ಬಯಸಿದ್ದೇವೆ. ಹಿಮಾಲಯ ಬೇಬಿ ಲೋಷನ್ ಮತ್ತು ಬೇಬಿ ಕ್ರೀಮ್ ಮೂಲಕ ಮಗುವಿನ ನಿತ್ಯದ ಚಳಿಗಾಲದ ಆರೈಕೆಯಲ್ಲಿ ವಿಶ್ವಾಸಾರ್ಹ ಪರಿಹಾರವನ್ನು ನೀಡುವ ಗುರಿ ನಮ್ಮದು. ಹಿಮಾಲಯ ಬೇಬಿಕೇರ್ನಲ್ಲಿ ನಾವು ಆಧುನಿಕ ಪಾಲಕರ ಬದಲಾಗುತ್ತಿರುವ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನೈಸರ್ಗಿಕ, ಸೌಮ್ಯ ಹಾಗೂ ನಂಬಿಕಸ್ಥ ಪರಿಹಾರಗಳನ್ನು ಒದಗಿಸಲು ಸದಾ ಬದ್ಧರಾಗಿದ್ದೇವೆ” ಎಂದು ತಿಳಿಸಿದರು.
ಈ ಅಭಿಯಾನವು ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ದೇಶದ ಒಟ್ಟು 10 ಪ್ರಮುಖ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

