ಲೇಖಕಿ ರೆಶೆಲ್ ಫರ್ನಾಂಡಿಸ್ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ‘ಭಾರತ್@2047 ರೋಲ್ ಆಫ್ ಯೂತ್’ (BHARAT@2047 ROLE OF YOUTH), ‘ಇನ್ಕ್ರೆಡಿಬಲ್ ಭಾರತ್ ವಿಷನ್ ಆಫ್ ವಿಕಸಿತ್ ಭಾರತ್’ (INCREDIBLE BHARAT VISION OF VIKSIT BHARAT), ‘ವಾಯ್ಸ್ ಆಫ್ ನೇಷನ್ ಯೂತ್ ಅಂಡ್ ಪಾಲಿಟಿಕ್ಸ್’ (VOICE OF NATION YOUTH AND POLITICS) ಮುಂತಾದ ಪ್ರಮುಖ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ
ಇವರು ‘ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ’ಯನ್ನು ಪಡೆದಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.
ನವದೆಹಲಿಯ ‘ಎಮರ್ಜಿಂಗ್ ಅಚೀವರ್ಸ್ ಕೌನ್ಸಿಲ್’ ಇವರನ್ನು ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭಕ್ಕೆ ಗೌರವಿಸಿದರು, ಈ ಕಾರ್ಯಕ್ರಮವು 2026ರ ಅಕ್ಟೋಬರ್ 3ರಂದು , ರಾಜಕಾರಣಿ ಶ್ರೀ ವಿಜಯ್ ಸಾಂಪ್ಲಾ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಹಾಗೂ ಗಾರ್ಗ್ ಏವಿಯೇಷನ್‌ನ ನಿರ್ದೇಶಕರಾದ ರಾಜೀವ್ ಭಲ್ಲಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಈ ಗೌರವವನ್ನು ಭಾರತ ಮಂಟಪದಲ್ಲಿ ಪ್ರಧಾನ ಮಾಡಲಾಯ್ತು.

