ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

0
11

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಮುಕ್ರಂಪಾಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದೆ.

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ಕೆ.ವಿ. ನಿಖಿಲ್ ಕುಮಾರ್ ಹಾಗೂ ನಿಹಾಲ್ ಸಿ. ರೈ ಮತ್ತು ದ್ವಿತೀಯ ಪಿಯುಸಿಯ ಅಭಿಲಾಷ್ ಹಾಗೂ ವಿಕ್ರಮ್ ಎ.ಜಿ. ಭಾಗವಹಿಸಿದ್ದರು.

ಬಾಲಕಿಯರ ತಂಡದಲ್ಲಿ ದ್ವಿತೀಯ ಪಿಯುಸಿಯ ಆತ್ಮಿಕಾ, ಎಚ್. ಮನ್ಮಿತಾ ಹಾಗೂ ಶರಣ್ಯಾ ಎಚ್.ಎನ್. ಭಾಗವಹಿಸಿದ್ದರು.

ತಂಡದ ಆಟಗಾರರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದರು.

ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿ, ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಶುಭ ಹಾರೈಸಿದ್ದಾರೆ.