ಶ್ರೀ ಕೃಷ್ಣ ಪರಿಸರ ಪ್ರತಿಷ್ಠಾನವು ಮಲ್ಪೆ ಕಡಲ ತೀರದ ಶ್ರೀಆನಂದ ಶರಧಿಯಲ್ಲಿ ಆಯೋಜಿಸಿದ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀಕಾಣಿಯೂರು ಮಠಾಧೀಶರಾದ ಶ್ರೀಶ್ರೀವಿದ್ಯಾವಲ್ಲಭ ತೀರ್ಥರು ತಾರೀಕು 24 ಮೇ ಬೆಳಿಗ್ಗೆ 9. 30 ರಂದು ನೆರವೇರಿಸಿದರು.
ದೀಪ ಪ್ರಜ್ವಲಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು ದೇಹ ಮನಸ್ಸು ಎರಡನ್ನೂ ಸಮತೂಕದಿಂದ ನೋಡಿಕೊಳ್ಳಬೇಕು. ಗ್ರಾಮೀಣ ಕ್ರೀಡಾಕೂಟಗಳು ದೇಹವನ್ನು ಸ್ವಸ್ಥವಾಗಿಡಲು ಸಹಕರಿಸುವುದಲ್ಲದೆ, ಮನಸ್ಸನ್ನು ಪ್ರಸನ್ನವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ಶ್ರೀ ಡಾ. ದೇರೆಬೈಲು ಶಿವಪ್ರಸಾದ ತಂತ್ರಿ, ಡಾ. ರೋಶನ್ ಶೆಟ್ಟಿ,ಸಂದೀಪ್ ಕುಮಾರ್,ಮಟ್ಟಾರು ರತ್ನಾಕರ ಹೆಗ್ಡೆ, ,ನಿತ್ಯಾನಂದ ಒಳಕಾಡು, ಯೋಗೀಶ್ ಸಾಲ್ಯಾನ್, ದಯೇಶ್, ದಶ ಮಹಾಬಲ, ವಿಶಾಲ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಗೋವಿಂದರಾಜ್ ರವರು ಸ್ವಾಗತಿಸಿದರು. ವೈಭವ್ ಕೊಡವೂರು ವಂದಿಸಿದರು. ವಿಜಯ ಕುಮಾರ್ ಕೊಡವೂರು ನಿರೂಪಿಸಿದರು.

