Saturday, June 14, 2025
HomeUncategorizedಪಾಲಡ್ಕದಲ್ಲಿ ಬ್ಯಾಂಕ್ ಖಾತೆ, ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ

ಪಾಲಡ್ಕದಲ್ಲಿ ಬ್ಯಾಂಕ್ ಖಾತೆ, ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ

ಮೂಡುಬಿದಿರೆ, : ಪಾಲಡ್ಕ ಗ್ರಾಮ ಪಂಚಾಯತ್ ಹಾಗೂ ಕೆನರ ಬ್ಯಾಂಕ್ ಪುತ್ತಿಗೆ ಶಾಖೆ ವತಿಯಿಂದ ‘ಜನ್‌ಧನ್’ (ಜೀರೋ ಬ್ಯಾಲನ್ಸ್) ಖಾತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಮೇ 14 ರಂದು ಪೂಪಾಡಿಕಲ್ಲು ನಾರಾಯಣಗುರು ಸಭಾಭವನದಲ್ಲಿ ಏರ್ಪಡಿಸಲಾಯಿತು.
ಪಾಲಡ್ಕ ಪಂಚಾಯತ್ ಅಧ್ಯಕ್ಷರಾದ ಅಮಿತಾ ನಾಯ್ಕ್, ಕೆ.ಎಂ.ಎಫ್. ಮಾಜಿ ಅಧ್ಯಕ್ಷರಾದ ಕೆ. ಪಿ ಸುಚರಿತ ಶೆಟ್ಟಿ ಮಾತನಾಡಿ ಸಾರ್ವಜನಿಕರಿಗೆ ಈ ರೀತಿಯ ಮಾಹಿತಿ ದೊರಕುವುದರಿಂದ ಸರಕಾರದ ಹಲವಾರು ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪಿಸಬಹುದು ಎಂದು ಶ್ಲಾಘಿಸಿದರು.ಶ್ರೀ ಲತೇಶ್. ಬಿ ಹಣಕಾಸು ಸಾಕ್ಷರತಾ ಸಮಾಲೋಚಕರು ‘ಅಮೂಲ್ಯ ‘ ಕೆನರಾ ಬ್ಯಾಂಕ್ ಮಂಗಳೂರು ಸಾಮಾಜಿಕ ಭದ್ರತೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಡಿ, ಕವಿತಾ N ಶೆಟ್ಟಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು (ಕೆನರಾ ಬ್ಯಾಂಕ್ )ದ. ಕನ್ನಡ, ಮನು ಶಿವನ್ ಶಾಖಾ ವ್ಯವಸ್ಥಾಪಕರು (ಕೆನರಾ ಬ್ಯಾಂಕ್ ಪುತ್ತಿಗೆ ), ಹಾಗೂ ಪಂಚಾಯತ್ ಸದಸ್ಯರು. ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular