ಮಲ್ಪೆಯಲ್ಲಿ ಹಲಸು,ಮಾವು,ಕೃಷಿ ಮೇಳ, ಕರಕುಶಲವಸ್ತುಗಳ ಪ್ರದರ್ಶನಕ್ಕೆ ಚಾಲನೆ

0
25

ಉಡುಪಿ: ಭಾರತೀಯ ಸಂಸತಿಯಲ್ಲಿ ಹಲಸು ಮತ್ತು ಮಾವಿನ ಮರಕ್ಕೆ ವಿಶೇಷ ಪ್ರಾಶಸವಿದೆ. ಯಾವುದೇ ಶುಭ ಕಾರ್ಯ ನಡೆಯಬೇಕಾದರು ಮಾವು ಮತ್ತು ಹಲಸಿನ ಚಿಗುರು ಅಗತ್ಯ. ಮಾವಿನ ತೋರಣ ಅವಶ್ಯ. ಹೀಗಾಗಿ ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಮಾವು ಮತ್ತು ಹಲಸಿನ ಮರ ಬೆಳೆಯಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಕಡಲತೀರದ ಮುಖ್ಯದ್ವಾರದ ಬಳಿ ಆನಂದ ಶರಧಿ ನಿವೇಶನದಲ್ಲಿ ಮಲ್ಪೆಯಲ್ಲಿ ಹಲಸು–&ಮಾವು- ಮೇಳ, ಕರಕುಶಲವಸ್ತುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಅಶೀರ್ವಚನ ನೀಡಿದರು.

ನಿವೇಶನದಲ್ಲಿ ಮೊದಲ ಬಾರಿಗೆ ಮಾವು ಮತ್ತು ಹಲಸಿನ ಮೇಳ ನಡೆಯುತ್ತಿರುವುದು ಮುಂದಿನ ಶುಭಕಾರ್ಯಗಳ ಸಂಕೇತವಾಗಿದೆ ಎಂದರು.

ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಮಾತನಾಡಿ, ಮಧ್ವರ ಭಕ್ತಿಗೆ ಒಲಿದು ಮಲ್ಪೆಯಲ್ಲಿ ಕೃಷ್ಣ ದೊರಕಿದ್ದಾನೆ. ಸಾಗರದಲ್ಲಿ ಸಾಗುವ ಹಡಗುಗಳಿಗೆ ಮಲ್ಪೆ ದೀಪಸ್ಥಂಭ ದಾರಿದೀಪವಿದ್ದಂತೆ ಅದೇ ರೀತಿ ಸಂಸಾರ ಸಾಗರದಲ್ಲಿರುವವರಿಗೆ ಈ ಕ್ಷೇತ್ರ ಮಾರ್ಗದರ್ಶನ ಕೇಂದ್ರವಾಗಲಿದೆ ಎಂದರು.

ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಾತನಾಡಿ, ಪ್ರತಿ ಮನೆ ಮತ್ತು ಮನಗಳಲ್ಲಿ ಕೃಷ್ಣನ ಪ್ರತಿಷ್ಠೆಯಾಗಬೇಕು. ಈ ನಿಟ್ಟಿನಲ್ಲಿ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರ ಭಕ್ತಿ ಮತ್ತು ಧರ್ಮಜಾಗೃತಿ ತಾಣವಾಗಲಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ಬೇಬಿ ಎಸ್. ಸಾಲ್ಯಾನ್, ಉದ್ಯಮಿ ಸಾಧು ಸಾಲ್ಯಾನ್, ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್, ನೇಕಾರರ ಸಂದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಉಪಸ್ಥಿತರಿದ್ದರು. ವಿಜಯ ಕೊಡವೂರು ಸ್ವಾಗತಿಸಿದರು. ಷಣ್ಮುಖ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here