ಕಾಪು ಮೆಸ್ಕಾಂ ; ಗ್ರಹ ಜ್ಯೋತಿ ಅರ್ಜಿಗಳ ಪರಿಶೀಲನೆ

0
3

ದಿನಾಂಕ 21.07.2026 ರಂದು ಕಾಪು ತಾಲೂಕು ಗ್ಯಾರಂಟಿ ಸಮಿತಿ ಕಛೇರಿಯಲ್ಲಿ ನವೀನ್ ಚಂದ್ರ ಎಸ್. ಸುವರ್ಣ, ಅಧ್ಯಕ್ಷರು, ಕಾಪು ತಾಲೂಕು ಗ್ಯಾರಂಟಿ ಸಮಿತಿ ರವರು ಕಾಪು ತಾಲೂಕು ಮಟ್ಟದ ಗೃಹಜ್ಯೋತಿ ಸರ್ವೆಯ ಬಗ್ಗೆ ಸಭೆಯನ್ನು ಹಮ್ಮಿಕೊಂಡಿದ್ದು, ಸದರಿ ಸಭೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾಪು ಉಪವಿಭಾಗ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಮಣಿಪಾಲ ಉಪವಿಭಾಗ ಇವರು ಗೃಹಜ್ಯೋತಿ ಸರ್ವೆ ಬಗ್ಗೆ ಮಾಹಿತಿ ನೀಡಿ ಹಾಗೂ ಹಾಜರಿದ್ದ ಕಾಪು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಸರ್ವೆ ಫಾರಂಗಳನ್ನು ವಿತರಿಸಿ ಗೃಹಜ್ಯೋತಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲು ಸಹಕಾರವನ್ನು ಕೋರಲಾಗಿರುತ್ತದೆ.