● ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕರ್ನಾಟಕ ಸರ್ಕಾರ, ಪ್ರೀಮಿಯರ್ ಲೀಗ್ ಮತ್ತು ಬ್ರಿಟಿಷ್ ಕೌನ್ಸಿಲ್ ಒಟ್ಟುಗೂಡಿ ಫುಟ್ಬಾಲ್ ಮತ್ತು ಕ್ರೀಡೆಯ ಶಕ್ತಿಯ ಮೂಲಕ ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಒದಗಿಸುತ್ತಾರೆ
● ಕರ್ನಾಟಕದಲ್ಲಿನ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ರಾಜ್ಯಾದ್ಯಂತದ 60 ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿಯನ್ನು ನೀಡಿದೆ.
● ಈ ಪ್ರೋಗ್ರಾಮ್ ಮಕ್ಕಳು ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಲು ಮತ್ತು ಆನಂದಿಸಲು ಉತ್ತಮ ಕಲಿಕಾ ವಾತಾವರಣವನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ, ಈ ಮೂಲಕ ಅವರು ತಮ್ಮ ಗುರಿಗಳನ್ನು ತಲುಪಲು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ.

ಬೆಂಗಳೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಶಿಕ್ಷಣ ಅವಕಾಶಗಳು ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ಯುಕೆ ಅಂತರರಾಷ್ಟ್ರೀಯ ಸಂಘಟನೆಯ ಬ್ರಿಟಿಷ್ ಕೌನ್ಸಿಲ್ ಮತ್ತು ಪ್ರೀಮಿಯರ್ ಲೀಗ್ ಜೊತೆಗಿನ ಪಾಲುದಾರಿಕೆಯೊಂದಿಗೆ ದೈಹಿಕ ಶಿಕ್ಷಣ ತರಬೇತುದಾರರಿಗಾಗಿ ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಇನ್ ಇಂಡಿಯಾ ತರಬೇತಿ ಪ್ರೋಗ್ರಾಮ್ ಅನ್ನು ಮುಕ್ತಾಯಗೊಳಿಸಿತು. ಈ ಸಹಯೋಗವು ಶಿಕ್ಷಣದಲ್ಲಿ ಕ್ರೀಡೆಯನ್ನು ಸಂಯೋಜಿಸಲು, ಕಲಿಕಾ ಅನುಭವಗಳನ್ನು ಉತ್ತಮಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಜೀವನ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಉದ್ದೇಶ ಹೊಂದಿದೆ.
ಅಕ್ಟೋಬರ್ 2024ರಲ್ಲಿ ಕರ್ನಾಟಕ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ನಡುವೆ ಕಾರ್ಯಾಚರಣಾ ಮೈತ್ರಿ ಒಪ್ಪಂದಕ್ಕೆ (OAA) ಸಹಿ ಹಾಕಲಾಯಿತು. ನಂತರದ ಐದು ತಿಂಗಳುಗಳಲ್ಲಿ, ರಾಜ್ಯಾದ್ಯಂತದ 60ಕ್ಕಿಂತ ಹೆಚ್ಚಿನ ಸರ್ಕಾರೀ ಶಾಲಾ ದೈಹಿಕ ಶಿಕ್ಷಣ ತರಬೇತುದಾರರು ಅತ್ಯಧಿಕ ಗುಣಮಟ್ಟದ ತರಬೇತಿ ವಿಧಾನಗಳು, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಪ್ರಾಯೋಗಿಕ ಕಲಿಕಾ ಅನುಭವವನ್ನೂ ಒಳಗೊಂಡಂತೆ 12 ದಿನಗಳ ಮುಖಾ-ಮುಖಿ ತರಬೇತಿಯನ್ನು ಪಡೆದರು.
ತರಬೇತಿಯ ಮೊದಲ ಹಂತದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗಾಗಿ ದೈಹಿಕ ಶಿಕ್ಷಣ ತರಬೇತಿಗಳನ್ನು ನೀಡುವಲ್ಲಿ ತಮ್ಮ ಕೌಶಲ್ಯಗಳನ್ನು ಮತ್ತು ತಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಂಡರು. ಪ್ರೋಗ್ರಾಮ್ ನ ನಂತರದ ಹಂತಗಳು ಶಿಕ್ಷಕರ ಆತ್ಮವಿಶ್ವಾಸವನ್ನು ಬಲಪಡಿಸುವುದು, ತಮ್ಮ ಸಹೋದ್ಯೋಗಿಗಳೊಂದಿಗೆ, ಸ್ನೇಹಿತರೊಂದಿಗೆ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ವಿಧಾನಗಳನ್ನು ಹಂಚಿಕೊಳ್ಳುವ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತರಬೇತಿಯ ಪ್ರಮಾಣವನ್ನು ವೃದ್ಧಿಸುವ ಕಡೆಗೆ ಗಮನ ಹರಿಸಲಾಯಿತು.
ಇತ್ತೀಚಿಗಷ್ಟೇ ತಮಿಳುನಾಡು, ದೆಹಲಿ, ಗೋವಾ ಮತ್ತು ಒರಿಸ್ಸಾದಲ್ಲಿ ಅನುಷ್ಠಾನಗೊಳಿಸಿದ ಬೆನ್ನಲೇ, ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಈಗ ಕರ್ನಾಟಕದವರೆಗೂ ಸಹ ವಿಸ್ತರಿಸುವ ಮೂಲಕ ತಮ್ಮ ಪ್ರಭಾವವನ್ನು ಮತ್ತಷ್ಟು ಪ್ರಬಲಗೊಳಿಸಿದೆ. ಕರ್ನಾಟಕದ ಪ್ರೋಗ್ರಾಮ್ ನ ಮೊದಲ ಹಂತದಲ್ಲಿ, ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಬೋಧನಾ ಚೌಕಟ್ಟುಗಳಲ್ಲಿ ಕ್ರೀಡೆಯನ್ನು ಸೇರಿಸಲು ಅದರಲ್ಲೂ ಫುಟ್ಬಾಲ್ ಸೇರಿಸಲು ಕಾರ್ಯತಂತ್ರಗಳೊಂದಿಗೆ ಅವರನ್ನು ಸಜ್ಜುಗೊಳಿಸುವುದರ ಕಡೆಗೆ ತರಬೇತಿಯು ಗಮನ ಹರಿಸಿತು. ತರಬೇತಿಯ ಕೊನೆಯ ಹಂತವನ್ನು ಏಪ್ರಿಲ್ 1 ರಿಂದ 4ರವರೆಗೆ ಆಯೋಜಿಸಲಾಗಿದೆ.
ಕರ್ನಾಟಕದಲ್ಲಿ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಪ್ರೋಗ್ರಾಮ್ ನ ಮುಕ್ತಾಯದ ಕಾರ್ಯಕ್ರಮದಂದು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ. ಮಧು ಬಂಗಾರಪ್ಪ ಮಾತನಾಡಿ, “ಬ್ರಿಟಿಷ್ ಕೌನ್ಸಿಲ್ ಮತ್ತು ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕರ್ನಾಟಕ ಇಲಾಖೆಯ ನಡುವಿನ ಗಮನಾರ್ಹ ಒಪ್ಪಂದವಾದ ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ನ ಅಭೂತಪೂರ್ವ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ನನಗೆ ಬಹಳ ಖುಷಿಯಾಗುತ್ತಿದೆ.”
“ಬ್ರಿಟಿಷ್ ಕೌನ್ಸಿಲ್, ಪ್ರೀಮಿಯರ್ ಲೀಗ್, ಮತ್ತು ತಮ್ಮ ಕಲಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಬದ್ಧ ಶಿಕ್ಷಕರಿಗೆ ನನ್ನ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ದೈಹಿಕ ಶಿಕ್ಷಣ ಶಿಕ್ಷಕರು ಈಗ ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಂಡ ಕಾರ್ಯ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಕೌಶಲ್ಯಗಳೊಂದಿಗೆ ಸಜ್ಜಾಗುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಇದು ಕರ್ನಾಟಕ ಸರ್ಕಾರದ ದೃಷ್ಟಿಕೋನವಾದ ಶಾಲಾ ಶಿಕ್ಷಣದಲ್ಲಿ ಗುಣಮಟ್ಟ, ಸಮಾನತೆ, ಮತ್ತು ಪ್ರವೇಶಾವಕಾಶವನ್ನು ರಚಿಸುವ ಜೊತೆಗೆ ಹೊಂದಾಣಿಕೆಯಾಗುತ್ತದೆ. ದೈಹಿಕ ಶಿಕ್ಷಣ ಶಾಲಾ ಶಿಕ್ಷಕರು ಈ ಪ್ರೋಗ್ರಾಮ್ ಮೂಲಕ ಪಡೆದ ಜ್ಞಾನವನ್ನು ಕರ್ನಾಟಕಾದ್ಯಂತದ ತಮ್ಮ ಶಾಲೆಗಳಲ್ಲಿ ಅಳಿಸಲಾಗದ ಪ್ರಭಾವ ಬೀರಲಿ ಎಂದು ನಾನು ಪ್ರೋತ್ಸಾಹಿಸುತ್ತೇನೆ.” ಎಂದರು.
ಇದೆ ಸಮಯದಲ್ಲಿ ಮಾತಾಡಿದ ಬ್ರಿಟಿಷ್ ಕೌನ್ಸಿಲ್ ನ ದಕ್ಷಿಣ ಭಾರತದ ನಿರ್ದೇಶಕರಾಗಿರುವ ಜನಕ ಪುಷ್ಪನಥಾನ್, “ಕರ್ನಾಟಕ ಸರ್ಕಾರದೊಂದಿಗೆ ನಮ್ಮ ರಾಜ್ಯವ್ಯಾಪಿ ಒಪ್ಪಂದವನ್ನು(MoU) ಪೂರೈಸಲು ನಾವು ಬಹಳ ಸಂತೋಷಪಡುತ್ತೇವೆ ಮತ್ತು ಈ ಮೂಲಕ ನಾವು ಪ್ರೀಮಿಯರ್ ಲೀಗ್ ಪ್ರೈಮರಿ ಸ್ಟಾರ್ಸ್ ಪ್ರೋಗ್ರಾಮ್ ಅನ್ನು ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ನಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸುತ್ತೇವೆ. ಪ್ರೀಮಿಯರ್ ಲೀಗ್ ಜೊತೆಗಿನ ಈ ನಮ್ಮ ಪಾಲುದಾರಿಕೆಯು ಜಗತ್ತಿನಾದ್ಯಂತದ ಸಮುದಾಯಗಳಲ್ಲಿ ಮತ್ತು ಶಾಲೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಮುಖ್ಯ ಮೈಲಿಗಲ್ಲಾಗಿ ಗುರುತು ಮಾಡುತ್ತದೆ. ಕ್ರೀಡೆಯ ಶಕ್ತಿಯನ್ನು ಬಳಸಿಕೊಳ್ಳುತ್ತಾ, ರಾಜ್ಯಾದ್ಯಂತ ದೀರ್ಘಕಾಲಿಕ ಪ್ರಭಾವವನ್ನು ರಚಿಸುತ್ತಾ ನಾವು ಯುವ ವಿದ್ಯಾರ್ಥಿಗಳಲ್ಲಿ ದೈಹಿಕ ಶಿಕ್ಷಣವನ್ನು ವೃದ್ಧಿಸಲು, ಅಗತ್ಯ ಜೀವನ ಕೌಶಲ್ಯಗಳನ್ನು ತುಂಬಿಸಲು ಮತ್ತು ಪ್ರಮುಖ ಸ್ಫರ್ಧಾತ್ಮಕತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದೇವೆ.” ಎಂದರು.
ಪ್ರೀಮಿಯರ್ ಲೀಗ್ ನಲ್ಲಿ ಸಮುದಾಯ ನಿರ್ದೇಶಕರಾಗಿರುವ ನಿಕ್ ಪೆರ್ಚರ್ಡ್ ಮಾತನಾಡಿ, “ಜಗತ್ತಿನಾದ್ಯಂತ ಆಟಗಳು ಮತ್ತು ಸಮುದಾಯಗಳನ್ನು ಅಭಿವೃದ್ಧಿಯಾಗಲು ಸಹಾಯ ಮಾಡುವ ಮೂಲಕ ಪ್ರೀಮಿಯರ್ ಲೀಗ್ ತನ್ನ ಯಶಸ್ಸನ್ನು ಹಂಚಿಕೊಳ್ಳಲು ಬದ್ಧವಾಗಿದೆ. ಬ್ರಿಟಿಷ್ ಕೌನ್ಸಿಲ್ ಮತ್ತು ಇತರ ಸ್ಥಳೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಮೂಲಕ ನಾವು ಪ್ರೀಮಿಯರ್ ಲೀಗ್ ಫುಟ್‌ಬಾಲ್‌ನ ಸಕಾರಾತ್ಮಕ ಸಾಮಾಜಿಕ ಪ್ರಭಾವವು ಆಟಕ್ಕಿಂತ ಹೆಚ್ಚಾಗಿರುವ ಅನುಭವವನ್ನು ನೀಡುವಂತಿರಬೇಕು ಎಂದು ದೃಢಸಂಕಲ್ಪ ಹೊಂದಿದ್ದೇವೆ, ಈ ಮೂಲಕ ನಾವು ಹೆಚ್ಚು ಅಗತ್ಯವಿರುವವರಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಸಮುದಾಯದ ನಾಯಕರನ್ನು ಬೆಂಬಲಿಸುತ್ತೇವೆ.” ಎಂದರು.
2007ರಿಂದ ಪ್ರೀಮಿಯರ್ ಲೀಗ್ ಮತ್ತು ಬ್ರಿಟಿಷ್ ಕೌನ್ಸಿಲ್ ಎರಡೂ 40,000ಕ್ಕಿಂತ ಅಧಿಕ ಫುಟ್ಬಾಲ್ ತರಬೇತುದಾರರು, ರೆಫರಿಗಳು, ಮತ್ತು ಶಿಕ್ಷಕರ ಕೌಶಲ್ಯಗಳನ್ನು ಅಭಿವೃದ್ಧಿಸಲು ಒಟ್ಟುಗೂಡಿ ಶ್ರಮಿಸಿದೆ, 29 ದೇಶಗಳಲ್ಲಿ 2.1 ಮಿಲಿಯನ್ ಗಿಂತ ಅಧಿಕ ಮಕ್ಕಳು ಮತ್ತು ಯುವಜನರ ಜೊತೆಗೆ ಕೆಲಸ ಮಾಡಿದೆ. ಭಾರತದಲ್ಲಿ, ಈ ಪಾಲುದಾರಿಕೆ ಚಟುವಟಿಕೆಗಳಿಂದ 18 ಜಿಲ್ಲೆಗಳಾದ್ಯಂತ 7300ಕ್ಕೂ ಅಧಿಕ ಶಿಕ್ಷಕರು ಮತ್ತು ತರಬೇತುದಾರರಿಗೆ ಬೆಂಬಲಿಸಿದೆ, ಈ ಮೂಲಕ 124,000ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರಯೋಜನಗಳನ್ನು ಪಡೆದಿದ್ದಾರೆ. ಭಾರತದಲ್ಲಿ ದೆಹಲಿ, ಗೋವಾ, ಒರಿಸ್ಸಾ ಮತ್ತು ತಮಿಳುನಾಡು ನಂತರ, ಕರ್ನಾಟಕ ಪ್ರೀಮಿಯರ್ ಪ್ರೈಮರಿ ಸ್ಟಾರ್ಸ್ ಪ್ರೋಗ್ರಾಮ್ ಅನುಷ್ಠಾನಗೊಂಡಿರುವ ಐದನೆಯ ರಾಜ್ಯವಾಗಿದೆ.