ಕರ್ನಾಟಕ ಪೊಲೀಸ್ ಕ್ಯಾಪ್ ವಿನ್ಯಾಸ ಬದಲಾವಣೆ

0
11

ಬೆಂಗಳೂರು: ಪೊಲೀಸರ ಟೋಪಿಯ ವಿನ್ಯಾಸ ಬದಲಾಯಿಸಲು ಕರ್ನಾಟಕ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್​ಗಳನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಪರಿಶೀಲನೆ ನಡೆಸಿದರು.

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಕ್ಯಾಪ್​ಗಳನ್ನು ಅವರು ವೀಕ್ಷಿಸಿದರು. ಪ್ರಸ್ತಾವಿತ ಕರ್ನಾಟಕ ಪೊಲೀಸ್ ಕ್ಯಾಪ್ ಮಾದರಿ ಬಗ್ಗೆ ಚರ್ಚೆ ನಡೆಸಿದರು. ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕ್ಯಾಪ್ ಬದಲಾವಣೆಗೆ ಇಲಾಖೆ ಚಿಂತನೆ ನಡೆಸಿದೆ.

LEAVE A REPLY

Please enter your comment!
Please enter your name here