ಕುಡಾಲು ಕನಾಕಪ್ಪಾಡಿ ತರವಾಡು ಮನೆ ಮತ್ತು ದೈವ ಚಾವಡಿಯ ಹರಕೆಯ ನೇಮೋತ್ಸವ

0
27

ಮಂಜೇಶ್ವರ : ಕುಡಾಲು ಕನಾಕಪ್ಪಾಡಿ ತರವಾಡು ಮನೆ ಹಾಗೂ ದೈವಚಾವಡಿಯ ಧೂಮಾವತಿ ಬಂಟ ದೈವಗಳ ಹರಕೆಯ ನೇಮೋತ್ಸವದ ಅಂಗವಾಗಿ ಕೋಡಿಂಗಾರು ಶಾಖೆಯ ವತಿಯಿಂದ ಹೊರೆ ಕಾಣಿಕೆ ಸಮರ್ಪಣೆವು ಇಂದು (ಮಾರ್ಚ್ 6) ಪೂರ್ವಾಹ್ನ ಜರುಗಿತು.

ಇಂದು ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಸಂಜೆ ಭಂಡಾರ ಏರುವುದು, ರಾತ್ರಿ ಎಂಟು ಗಂಟೆಗೆ ಮೈಸಂದಾಯ ದೈವದ ನೇಮ, ರಾತ್ರಿ ಹತ್ತು ಗಂಟೆಗೆ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಮಾರ್ಚ್ ಏಳರಂದು ಬೆಳಿಗ್ಗೆ ಹತ್ತು ಗಂಟೆಗೆ ಬಿರ್ನಾಳ ದೈವದ ನೇಮ, ಸಂಜೆ ಆರಕ್ಕೆ ಕೊರತಿ ದೈವದ ಕೋಲ,ರಾತ್ರಿ ಏಳು ಮೂವತ್ತಕ್ಕೆ ಕುಪ್ಪೆಟ್ಟು ಪಂಜುರ್ಲಿ ಮತ್ತು ಕಲ್ಲುರ್ಟಿ ದೈವದ ಕೋಲ.ಮಾರ್ಚ್ ಎಂಟಕ್ಕೆ ಬೆಳಿಗ್ಗೆ ಎಂಟು ಗಂಟೆಗೆ ಎಣ್ಣೆ ವೀಳ್ಯ ಕೊಡುವುದು,10ರಿಂದ ಧೂಮಾವತಿ ದೈವದ ನೇಮ ಮಧ್ಯಾಹ್ನ ಹನ್ನೆರಡು ಗಂಟೆಗೆ ಪ್ರಸಾದ ವಿತರಣೆ ನಂತರ ಅನ್ನದಾನ, ಸಂಜೆ ನಾಲ್ಕು ಗಂಟೆಗೆ ಗುಳಿಗ ದೈವದ ಕೋಲದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ.

LEAVE A REPLY

Please enter your comment!
Please enter your name here