ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಉಡುಪಿ ಜಿಲ್ಲೆ ಕುಂದಾಪುರ ಹೆಬ್ರಿ ಪರಿಸರದ ಪ್ರತಿಭೆ ಕುಮಾರಿ ರಿಷಾ ಆರ್. ಶೆಟ್ಟಿ

0
55

ಕುಂದಾಪುರ : ಕರ್ನಾಟಕದ ಹೆಮ್ಮೆಯ ಪ್ರತಿಭೆ ಕುಮಾರಿ ರಿಷಾ ಆರ್. ಶೆಟ್ಟಿ ಅವರು ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಜೂನ್ 4 ರಿಂದ 8, 2026 ರವರೆಗೆ ನಡೆದ ಪ್ರಥಮ ವಿಶ್ವ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಜಯಿಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.

ವಿವಿಧ ದೇಶಗಳ ಸ್ಪರ್ಧಿಗಳ ನಡುವೆ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ರಿಷಾ ಅವರು ತಮ್ಮ ಅದ್ಭುತ ಯೋಗಾಸನ ಕೌಶಲ್ಯ ಪ್ರದರ್ಶಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಅವರ ಈ ಸಾಧನೆ ಕುಂದಾಪುರ ತಾಲೂಕು,ಹೆಬ್ರಿ ತಾಲೂಕು,ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ರಿಷಾ ಅವರ ಸಾಧನೆಗೆ ಕ್ರೀಡಾಭಿಮಾನಿಗಳು, ಯೋಗಾಸನ ತರಬೇತುದಾರರು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.ಕುಮಾರಿ ರಿಷಾ ಆರ್ ಶೆಟ್ಟಿ ಅವರಿಗೆ ಈ ಮಟ್ಟಕ್ಕೆ ತಲುಪಲು ಯಾವುದೇ ವಿಶೇಷ ಸರ್ಕಾರಿ ನೆರವು ದೊರಕಿರಲಿಲ್ಲ. ಆರ್ಥಿಕ ಸಂಕಷ್ಟ, ಸೌಲಭ್ಯಗಳ ಕೊರತೆ ನಡುವೆಯೂ ತಂದೆ ತಾಯಿ,ಯ ಬೆಂಬಲ ಮತ್ತು ಸ್ವಂತ ಕಠಿಣ ಪರಿಶ್ರಮ ಭಾರತಾಂಬೆಯ ಆಶೀರ್ವಾದ ದ ಮೂಲಕ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್, ವಿಶ್ವ ವೇದಿಕೆಯಲ್ಲಿ ಡಬಲ್ ಚಿನ್ನ ಗೆದ್ದು ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಸಾಧನೆಯನ್ನು ಗುರುತಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತ ಗೌರವ ಮತ್ತು ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಮಾಹಿತಿ ಗಾಗಿ – ರಾಜೇಂದ್ರ ಶೆಟ್ಟಿ -9008577753

LEAVE A REPLY

Please enter your comment!
Please enter your name here