ಹೊಸ ಎಲ್‌ಕೆಜಿ ತರಗತಿಗೆ ಲಯನ್ಸ್ ಕ್ಲಬ್‌ನ ಸೇವಾ ಉಪಕ್ರಮ

0
13

ಲಯನ್ಸ್ ಕ್ಲಬ್ ಸೋಮೇಶ್ವರದ ಸೇವಾ ಚಟುವಟಿಕೆಗಳ ಭಾಗವಾಗಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಶಾಲೆ ಕುಂಪಲದಲ್ಲಿ ಈ ಶೈಕ್ಷಣಿಕ ವರ್ಷದಿಂದ ನೂತನವಾಗಿ ಆರಂಭವಾಗುತ್ತಿರುವ ಎಲ್‌ಕೆಜಿ ತರಗತಿಯ ಪುಟಾಣಿಗಳಿಗೆ ಬೇಬಿ ಚೇರ್‌ಗಳನ್ನು ಒದಗಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ ವಹಿಸಿದ್ದರು. ಕೇಸರಿ ಮಿತ್ರ ವ್ರoದ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸುಧಾಕರ್ ಕುಂಪಲರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಂಪಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಸ್ವಾಗತ ಭಾಷಣ ಮಾಡಿದರು. ಕ್ಲಬ್ ಖಜಾಂಚಿ ಲಯನ್ ನಿತೀಶ್ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲಯನ್ ಶಶಿಕುಮಾರ್ ನಾಯರ್ ಹಾಗೂ ಕೇಸರಿ ಮಿತ್ರವ್ರoದದ ಟ್ರಸ್ಟಿ ಶ್ರೀ ಶೇಖರ್ ಕುಂಪಲ ಮಾತನಾಡಿದರು. ಶಿಕ್ಷಕರು, ಪೋಷಕರು ಹಾಗೂ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ಲಬ್‌ನ ಬದ್ಧತೆಯನ್ನು ಈ ಸೇವಾ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ.

LEAVE A REPLY

Please enter your comment!
Please enter your name here