ಶ್ರೀರುದ್ರಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷತ್ರಯೋದಶಿ ಪ್ರ ದೋಷ ಪುಣ್ಯ ಕಾಲದಲ್ಲಿ ಕಲ್ಲಡ್ಕ ಕುದುರೆಬೆಟ್ಟು ದಾಸ ಕೋಡಿಕಂದೂರು ರಾಜಾರಾಮ ಐತಾಳರ ಮನೆಯಲ್ಲಿಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶತ ರುದ್ರ ಪಾರಾಯಣದ ಅಂಗವಾಗಿ ಲಗುನ್ಯಾಸ ,ನಮಕ,ಚಮಕ,ಗಣಪತಿ ಸೂಕ್ತ ಭಾಗ್ಯ ಸೂಕ್ತ ದೇವಿ ಸೂಕ್ತ,ಗಣಪತಿ ಅಥರ್ವಶೀರ್ಷ, ಸ್ವಸ್ತಿಸೂಕ್ತ , ವಿಷ್ಣುಸೂಕ್ತ ಪುರುಷ ಸೂಕ್ತ,ಮೇಧ ಸೂಕ್ತ ,ಆಗಮರ್ಶಣಸೂಕ್ತ, ಮಂತ್ರ ಪುಷ್ಪ ಮೊದಲಾದ ವೇದ ಸೂಕ್ತಗಳನ್ನು ಪಠಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್, ಸಂಚಾಲಕ ಎ ರವಿಶಂಕರ ಮೈಯ್ಯ, ಕೆ ರಮೇಶ ಹೊಳ್ಳ,ಕೆ ರಘುರಾಮ ರಾವ್,ಶಾಂತ ರಾಮ ಎಸ್ ಬಿ, ಎಂ ಜಯರಾಮ ಮೈಯ್ಯ, ಮಕ್ಕಾರು ಶ್ರೀನಿವಾಸ ಹೊಳ್ಳ, ಎನ್ ರಾಮಚಂದ್ರಮಯ್ಯ, ಪದ್ಮನಾಭ ಹೊಳ್ಳ,ಡಾ ಸೀತಾರಾಮ ಮೈಯ್ಯ, ಕೆ ಮಿಥುನರಾವ್, ಸುಧಾಕರ ತುಂಗ, ಅನಂತ ಪದ್ಮನಾಭ ರಾವ್, ಚಂದ್ರ ಮೋಹನ ರಾವ್,ಎ ದನೇಶ್ವರ ರಾವ್, ವಿಭವ ಮೈಯ್ಯ,ಎಂ ರಮೇಶ್ ರಾವ್, ವೇಣುಗೋಪಾಲ ಹೊಳ್ಳ, ನವೀನ್ ರಾವ್, ಮೊದಲಾದವರು ಪಾಲ್ಗೊಂಡರು.

