Saturday, June 14, 2025
HomeUncategorizedಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ತನ್ನ ಬಾಧೆ ತೋಡಿಕೊಂಡ ಮಂಗ

ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ತನ್ನ ಬಾಧೆ ತೋಡಿಕೊಂಡ ಮಂಗ

ಬಾಗಲಕೋಟೆ: ಮನುಷ್ಯರಿಗೆ ಆರೋಗ್ಯ ಸಮಸ್ಯೆ ಆದರೆ ಕೂಡಲೇ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರಿಗೆ ಸಮಸ್ಯೆ ಹೇಳಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮಂಗ  ನೇರವಾಗಿ ಪಶು ಆಸ್ಪತ್ರೆಗೆಹೋಗಿದೆ. ತನಗಾದ ಸಮಸ್ಯೆಯನ್ನು ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ. ಸದ್ಯ ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮಂಗಗಳು ಮನುಷ್ಯರಷ್ಟೇ ಬುದ್ದಿ ಜೀವಗಳು ಅನ್ನೋದಕ್ಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ಗಡೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಗ, ಚಿಕಿತ್ಸೆಗಾಗಿ ನೇರವಾಗಿ ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ಸನ್ನೆ ಮೂಲಕ ತನ್ನ ಬಾಧೆಯನ್ನು ಹೇಳಿಕೊಂಡು ಅಚ್ಚರಿಗೆ ಗ್ರಾಸವಾಗಿದೆ.

ತನ್ನ ಗುದದ್ವಾರದ ಬಳಿ ಗಾಯವಾಗಿ, ತೀವ್ರ ನೋವಿನಿಂದ ಬಳಲುತ್ತಿದ್ದ ಕೋತಿಯೊಂದಕ್ಕೆ ತನ್ನ ನೋವಿಗೆ ಪರಿಹಾರ ಕಂಡುಕೊಂಡು ತಾನೆ ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಬಳಿ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೇ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ತಪಾಸಣೆ ಮಾಡುವಾಗ ಕೋತಿ ತನಗಾದ ಗಾಯದ ಬಗ್ಗೆ ತಾನೆ ತೋರಿಸಿದೆ. ಬಳಿಕ ಚಿಕಿತ್ಸೆ ನೀಡಲಾಗಿದೆ. ಮೂಕ ಪ್ರಾಣಿಯಾದರೂ ಈ ಮಂಗ ಯಾವ ಮನಷ್ಯನಿಗೂ ಕಮ್ಮಿ ಇಲ್ಲದಂತೆ ಬುದ್ದಿವಂತಿಕೆ ತೋರಿಸಿದೆ.

ಗುಡೂರ ಗ್ರಾಮದಲ್ಲಿ ಮಂಗಗಳ ಹಿಂಡು ಬೀಡುಬಿಟ್ಟಿದೆ. ಈ ಕೋತಿಗಳು ನಿತ್ಯ ಆಸ್ಪತ್ರೆ ಸುತ್ತಮುತ್ತಲಿನ ಗಿಡಮರಗಳಲ್ಲಿ ಓಡಾಡುತ್ತಿದ್ದವು. ಈ ಕೋತಿಯ ಬಾಲ ಕೂಡ ಮೊದಲೇ ಕಟ್ ಆಗಿದೆ. ಮರದಿಂದ ಮರಕ್ಕೆ ನೆಗೆಯುವಾಗ ಗುದದ್ವಾರದ ಬಳಿ ಗಾಯ ಆಗಿರುವ ಸಾಧ್ಯತೆ ಇದೆ. ಆ ಗಾಯದಿಂದ ಮಂಗಣ್ಣ ಬಳಲುತ್ತಿತ್ತು. ಬಹುಶಃ ಆಸ್ಪತ್ರೆ ಹೊರಗೆ ನಿತ್ಯ ಹಸು ಎಮ್ಮೆಗಳಿಗೆ ಚಿಕಿತ್ಸೆ ನಿಡುವುದನ್ನು ಗಮನಿಸಿದಂತ್ತಿದೆ. ತನಗೂ ನೋವಾದ ಹಿನ್ನೆಲೆ ಜಾನುವಾರುಗಳಂತೆ ತನ್ನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಬಂದಿರಬಹುದು.

ಆಸ್ಪತ್ರೆ ಬಳಿ ಇದ್ದ ಬೈಕ್ ಮೇಲೆ ಮಲಗಿ ಕೈ ಸನ್ನೆ ಮೂಲಕ ತನ್ನ ನೋವಿನ ವೇದನೆಯನ್ನು ಕೋತಿ ತೋಡಿಕೊಂಡಿದೆ. ಆಗ ವೈದ್ಯ ಕೋತಿ ನೋವು ಅರ್ಥೈಸಿಕೊಂಡು ಚಿಕಿತ್ಸೆ ನೀಡಿದ್ದಾರೆ. .

RELATED ARTICLES
- Advertisment -
Google search engine

Most Popular