ವಾಗಜ್ಯೋತಿ ಶಾಲೆಯ ವಿಶೇಷ ಮಕ್ಕಳಿಗೆ ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿ

0
77

ಸಮ್ರದ್ದ ಬೈಂದೂರು ಪರಿಕಲ್ಪನೆಯಡಿಯಲ್ಲಿ 300 ಟ್ರೀ,ಸ್ವಯಂ ಸ್ಫೂರ್ತಿ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ವಾಗಜ್ಯೋತಿ ಶಾಲೆಯ ವಿಶೇಷ ಮಕ್ಕಳಿಗೆ ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿ ವಿತರಿಸಲಾಯಿತು

ಮಾನ್ಯ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಅವರ ಅಸಮರ್ಥತೆ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಬದ್ಧತೆಯನ್ನು ತೋರಿಸುತ್ತದೆ. ಭಾರತದಲ್ಲಿ ಹೆಚ್ಚು ಅಂತರ್ಗತ ಮತ್ತು ಸಮಾನ ಶಿಕ್ಷಣ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ ಸ್ವಯಂ
ಸ್ಫೂರ್ತಿ ಫೌಂಡೇಶನ್ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿ ಸಹಕರಿಸಿದ್ದಾರೆ ಇವರ ಸೇವೆ ಅಮೂಲ್ಯವಾದದು ಎಂದರು

ಸ್ವಯಂ ಸ್ಫೂರ್ತಿ ಸಂಸ್ಥೆ ಅಧ್ಯಕ್ಷರು ನಾಗರಾಜ್ ಶೇಟ್ ನೋಟ್ ಬುಕ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರಾದ ರವೀಂದ್ರ ಹೆಚ್, ಪಂಚಾಯತ್ ಉಪಾಧ್ಯಕ್ಷರು ಅಶೋಕ್ ಮಾಜಿ ಪಂಚಾಯತ್ ಅಧ್ಯಕ್ಷರು ಭಾರತಿ ಶೇಟ್, ಸ್ಥಳೀಯರಾದ ಸುರೇಶ್ ಮೂಡುಬಗೆ, ನವೀನ್, ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿ ನಿರೂಪಿಸಿದರು ನಿರೂಪಿಸಿದರು.

LEAVE A REPLY

Please enter your comment!
Please enter your name here