ಲಯನ್ಸ್ ಕ್ಲಬ್ ಬೆಳ್ಮನ್‌ನಿಂದ ಶಾಂತಿ ಚಿತ್ರ ಸ್ಪರ್ಧೆ

0
38

ಕಾರ್ಕಳ : ಲಯನ್ಸ್ ಕ್ಲಬ್ ಬೆಳಮಣ್ ವತಿಯಿಂದ ಪೂರ್ಣ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಶಾಂತಿ ಚಿತ್ರ ಕಲಾ ಸ್ಪರ್ಧೆ ಜರುಗಿತು. ಮನವಿತೆಯಲ್ಲಿ ಸಾಮರಸ್ಯ ಎಂಬ ದ್ಯೇಯ ವಾಕ್ಯ ದ ಮೇಲೆ 25 ವಿದ್ಯಾರ್ಥಿಗಳು ಶಾಂತಿ ಚಿತ್ರವನ್ನು ರಚಿಸಿದವರು. ಲಯನ್ಸ್ ಕ್ಲಬ್ ಬೆಳಮಣ್ ವತಿಯಿಂದ ಕಾರ್ಯದರ್ಶಿ ಟೀನಾ ಡೇಸಾ, ಸಂಧ್ಯಾ ಹೆಗಡೆ ಮತ್ತು ಜ್ಯೋತಿ ಆಚಾರ್ಯ ರವರು ಭಾಗವಹಿಸಿ ಕ್ಲಬ್ ನ ಪರವಾಗಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ‌

ಸ್ಪರ್ಧೆ ಯನ್ನು ಯಶಸ್ವಿ ಯಾಗಿ ನಡೆಸಿ ಕೊಟ್ಟಿದ್ದಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಾಂತಿ ಭಟ್ ರವರಿಗೆ ಸ್ಮರಣಿಕೆ ಯನ್ನು ನೀಡಲಾಯಿತು. ಶಾಲಾ ಸಹ ಶಿಕ್ಷಕಿ ಸಂಗೀತ ರವರು ಸಹಕರಿಸಿದರು.ವಿದ್ಯಾರ್ಥಿಗಳು ತಮ್ಮ ಚಿತ್ರ ಕಲೆಯ ಮೂಲಕ ಮಾನವೀಯತೆ, ಶಾಂತಿ, ಸಾಮರಸ್ಯದ ಮಹತ್ವ ವನ್ನು ಅತ್ಯುತ್ತಮವಾಗಿ ಅಭಿವ್ಯಕ್ತಗೊಳಿಸಿದರು.