ಪ್ರಿಯದರ್ಶಿನಿ, ಹಳೆಯಂಗಡಿ:- 5ನೇ ವರ್ಷದ ಸಂಭ್ರಮಾಚರಣೆ: ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ

0
9

ಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ ಮೇ 20ರಂದು ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಲ್ಕಿ ಅರಮನೆ ಅಭಿವೃದ್ದಿ, ಪತ್ರಕರ್ತರ ಸಂಘ, ಪೂಜಾ ಫ್ರೆಂಡ್ಸ್, ಭಗವತಿ ಫ್ರೆಂಡ್ಸ್, ಗ್ರಾಮ ಪಂಚಾಯತ್ ಒಕ್ಕೂಟಗಳು, ಯುವಕ ಯುವತಿ ಮಂಡಲಗಳು, ಸ್ಪೋರ್ಟ್ಸ್, ಭಜನಾ ಮಂದಿರ, ರಿಕ್ಷಾ ಚಾಲಕ ಮಾಲಕರ ಸಂಘ ಇತ್ಯಾದಿಗಳ ಸಹಯೋಗದಲ್ಲಿ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ದ ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್ಎನ್ ರಮೇಶ್ ದೀಪಬೆಳಗಿ ಉದ್ಘಾಟಿಸಿ, ಸಾರ್ವಜನಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿ ಐದನೇ ಶಾಖೆಯನ್ನು ತೆರೆಯುತ್ತಿರುವ ಸೊಸೈಟಿಗೆ, ಅದರ ಉತ್ತಮ ಕಾರ್ಯಗಳಿಗೆ ಶುಭವನ್ನು ಹಾರೈಸಿದರು. ಉಡುಪಿ ಹಾಗೂ ದ ಕ ಜಿಲ್ಲೆಗಳಲ್ಲಿ ಸಹಕಾರಿ ಸೊಸೈಟಿ ಗಳು ಬಹಳ ಉತ್ತಮ ರೀತಿಯಲ್ಲಿ ಜನರಿಗೆ ಬೇಕಾದಂತೆ ಸೌಲಭ್ಯಗಳನ್ನು ಒದಗಿಸುತ್ತಿರುವುದಕ್ಕೆ ಶ್ಲಾಘಿಸಿದರು.

ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ ದುರ್ಬಲ ವರ್ಗದ ಐದು ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆಯ ಉತ್ತಮ ಪರಂಪರೆಯನ್ನು ಶ್ಲಾಘಿಸಿದರು. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಮಾನ್ಯ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಜನರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿರುವುದಕ್ಕೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಶಿವಾನಂದ ಪ್ರಭು ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕವಾಗಿ ಸೊಸೈಟಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದಕ್ಕೆ ಮಂಗಳೂರು ವುಡ್ ಸೈಡ್ ಜನರಲ್ ಮ್ಯಾನೇಜರ್ ಭಾಸ್ಕರ್ ಸಾಲಿಯಾನ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮನ್ಸೂರ್ ಸಾಗ್, ಮುಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು.

ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ್ದರು. ನಿತೇಶ್ ವೈದ್ಯಕೀಯ ಶಿಬಿರದ ಮಾಹಿತಿ ನೀಡಿದರು. ತಜ್ಞ ವೈದ್ಯರುಗಳಾದ ಡಾ. ನಿತ್ಯಾನಂದ ಚೌಟ, ಡಾ. ಸುಧೀಂದ್ರ ಕಾರ್ನಾಡ್, ಡಾ. ಕೀರ್ತನ್ ರಾವ್, ಡಾ. ಉನ್ನಿ ಕೃಷ್ಣನ್ ನೈನಾರ್, ಡಾ. ಸಂಗೀತ ಭಟ್ ರೋಗಿಗಳ ತಪಾಸಣೆಯನ್ನು ನಡೆಸಿದರು. ಶಾಖಾ ಪ್ರಬಂಧಕಿ ಅಭೀಷ್ಟ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.
.

LEAVE A REPLY

Please enter your comment!
Please enter your name here