ಪ್ರೊ. ಬಿ.ಎ. ವಿವೇಕ ರೈ ಎಂಬತ್ತರ ಸಂಭ್ರಮ: ಮೇ.21 ವಿದ್ಯಾರ್ಥಿ ಕಲಾವಿದರಿಂದ ಕಲಾಭಿನಂದನೆ, ತಾಳಮದ್ದಳೆ ಕಾರ್ಯಕ್ರಮ

0
7

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೋ.ಬಿ.ಎ. ವಿವೇಕ ರೈ ಅವರ ಎಂಬತ್ತರ ಸಂಭ್ರಮ ಪ್ರಯುಕ್ತ ವಿದ್ಯಾರ್ಥಿ ಕಲಾವಿದರಿಂದ ವಿಶೇಷ “ಕಲಾಭಿನಂದನೆ” ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವು ಮೇ 21, 2026ರ ಗುರುವಾರ ಮಧ್ಯಾಹ್ನ 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ ಸಭಾಂಗಣ (ಹಳೆ ಸೆನೆಟ್ ಸಭಾಂಗಣ)ದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ.ಪಿ.ಎಲ್‌.ಧರ್ಮ ವಹಿಸಲಿದ್ದಾರೆ. ಲೇಖಕರು ಹಾಗೂ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್‌ ಅಭಿವಂದನಾ ನುಡಿಗಳನ್ನಾಡಲಿದ್ದಾರೆ.

ಈ ಸಂದರ್ಭದಲ್ಲಿ “ಭೀಷ್ಮಾರ್ಜುನ ಕಾಳಗ” ಎಂಬ ತಾಳಮದ್ದಳೆ ಪ್ರದರ್ಶನ ನಡೆಯಲಿದ್ದು, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ಕೃತಿಗೆ ಭಾಗವತರಾಗಿ ಸುಬ್ರಾಯ ಸಂಪಾಜೆ ಭಾಗವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ನಾಗವೇಣಿ ಮಂಚಿ, ಗಣರಾಜ ಕುಂಬಳೆ ಹಾಗೂ ರಾಧಾಕೃಷ್ಣ ಕಲ್ವಾರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಯಕ್ಷಗಾನಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಮತ್ತು ಕುಲಸಚಿವರು (ಪ್ರಭಾರ) ಡಾ.ಗಣೇಶ್‌ ಸಂಜೀವ್‌ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here