ಕುತ್ಲೂರು ಅಂಚೆ ಇಲಾಖೆ ವತಿಯಿಂದ ಬೃಹತ್ ಆಧಾರ್ ನೋಂದಣಿ, ತಿದ್ದುಪಡಿ,ಅಪಘಾತ ಹಾಗೂ ಆರೋಗ್ಯ ವಿಮೆ ಮೇಳ ಯಶಸ್ವಿ

0
21

ಶ್ರೀ ಗುರುನಾರಾಯಣ ಸೇವಾ ಸಂಘ(ರಿ) ಕುತ್ಲೂರು ನಲ್ಲಿ ದಿನಾಂಕ 17-05-2026ರಂದು ಆದಿತ್ಯವಾರ ಪುತ್ತೂರು ಅಂಚೆ ಇಲಾಖೆಯ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ/ತಿದ್ದುಪಡಿ, ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ ಮೇಳ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಗುರುನಾರಾಯಣ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಮೇಳದಲ್ಲಿ ಆಧಾರ್ ತಿದ್ದುಪಡಿ, ಹೊಸ ನೋಂದಣಿ ಸೇರಿದಂತೆ ಅಪಘಾತ ಮತ್ತು ಆರೋಗ್ಯ ವಿಮೆಯ ವಿವಿಧ ಸೌಲಭ್ಯಗಳನ್ನು ಅನೇಕ ಮಂದಿ ಪಡೆದುಕೊಂಡರು.

ಪುತ್ತೂರು ಅಂಚೆ ಇಲಾಖೆಯ ಪರವಾಗಿ ಆಧಾರ್ ಆಪರೇಟರ್ ಪ್ರಜ್ವಲ್ ಸಿ.ವಿ., ನಾರಾವಿ ಉಪ ಅಂಚೆ ಕಚೇರಿ ಹಾಗೂ ಅದರ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿಗಳು ಭಾಗವಹಿಸಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಿದರು.

LEAVE A REPLY

Please enter your comment!
Please enter your name here