ಅರುಣ್ ಕುಮಾರ್ ಬೋರುಗುಡ್ಡೆ ತನ್ನ ಸರ್ವಸ್ವವನ್ನು ಸಮಾಜ ಸೇವೆಗಾಗಿ ಅರ್ಪಿಸಿದ ಅಪರೂಪದ ವ್ಯಕ್ತಿ: ರಾಜೇಶ್ ನಾಯಕ್

0
489

ಬಂಟ್ವಾಳ :ಅರುಣ್ ಕುಮಾರ್ ಬೋರುಗುಡ್ಡೆ ತನ್ನ ಸರ್ವಸ್ವವನ್ನು ಸಮಾಜ ಸೇವೆಗಾಗಿ ಅರ್ಪಿಸಿದ ಅಪರೂಪದ ವ್ಯಕ್ತಿ ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಬಣ್ಣಿಸಿದರು.
ಅವರು ಬುಧವಾರ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನರಿಕೊಂಬು ಗ್ರಾ.ಪಂ.ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ ನಿರ್ದೇಶಕರಾದ ಅರುಣ್ ಕುಲಾಲ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ರವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು .

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೋಟ್ಯಾಡಿ,ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು, ಯಶೋಧರ ಕರ್ಬೆಟ್ಟು, ಜನಾರ್ದನ ಬೊಂಡಲ, ಸುರೇಶ್ ಕುಲಾಲ್ ,ಜಗನಾಥ ಬಂಗೇರ ನಿರ್ಮಲ್, ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು. ಕಿರಣ್ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here