ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಆದಿತ್ಯವಾರ ಜೂ ,೦7 ರಂದು ” ಗಾಯತ್ರಿ ಹವನ ” ನೆಡೆಯಿತು. ಸೇವಾದಾರದ ಉಡುಪಿ ಅಭರಣ ಜ್ಯುವೆಲ್ಲರ್ಸ್ ಮಾಲಕರಾದ ಸಂಧ್ಯಾ , ಸುಭಾಸ್ ಕಾಮತ್ ದಂಪತಿಗಳು ಪೂಜಾ ಕಾರ್ಯದಲ್ಲಿ ಸಹಕರಿಸಿದರು.

ದೇವಳದ ಅರ್ಚಕರಾದ ವಿನಾಯಕ ಭಟ್ , ದಯಾಘನ್ ಭಟ್ , ದೀಪಕ್ ಭಟ್, ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು , ಶ್ರೀದೇವರಿಗೆ ಪಂಚಾಮೃತ ಅಭಿಷೇಕ , ವಿಶೇಷ ಅಲಂಕಾರ ,ಯಾಗದ ಪೂರ್ಣಾಹುತಿ ಬಳಿಕ ಮಹಾಪೂಜೆ ,ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನೆಡೆಯಿತು.
ದೇವಳದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್ , ಆಡಳಿತ ಮಂಡಳಿಯ ಸದಸ್ಯರು , ಅರ್ಚಕವೃಂದ , ಸ್ವಯಂ ಸೇವಕರು , ಸೇವಾದಾರರು , ಜಿ ಎಸ್ ಬಿ ಯುವಕ / ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಬಾಂದವರು ಉಪಸ್ಥರಿದ್ದರು.

