ಬೆಳ್ತಂಗಡಿ: ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಅವರು ಉದಯೋನ್ಮುಖ ಯುವ ಲೇಖಕಿ, ಪ್ರತಿಭಾವಂತೆ ಕುಮಾರಿ ಶೌರ್ಯ ಎಸ್. ವಿ. ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ನಿವಾಸಕ್ಕೆ ತೆರಳಿ ಗೌರವಿಸಿ ಕಿರು ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ ದಾಸ್, ಸುದರ್ಶನ್ ಕನ್ಯಾಡಿ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಶೌರ್ಯ ಎಸ್ ವಿ ಅವರ ಪ್ರೀತಿ ಏಕೆ ಭೂಮಿ ಮೇಲಿದೆ ಎಂಬ ಚೊಚ್ಚಲ ಪುಸ್ತಕವನ್ನು ಪೂಜ್ಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದ್ದರು.

